ಐಎಎಸ್ ಅಧಿಕಾರಿ ಶಾ ಫೈಸಲ್ ಹಾಕಿದ ಮಹಿಳಾ ಸಹೋದ್ಯೋಗಿಯ ರಾಜೀನಾಮೆ ಪೋಸ್ಟ್

Update: 2016-12-06 10:37 GMT

ಹೊಸದಿಲ್ಲಿ,ಡಿ.6 :ಸಿವಿಲ್ ಸರ್ವಿಸ್ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ಪ್ರಥಮ ಕಾಶ್ಮೀರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಾ ಫೈಸಲ್ ಎಂಬ ಐಎಎಸ್ ಅಧಿಕಾರಿಯು ಮಹಿಳಾ ಸರಕಾರಿ ಉದ್ಯೋಗಿಯೊಬ್ಬರ ರಾಜೀನಾಮೆ ಪತ್ರ ತಮ್ಮ ಬಳಿಗೆ ಬಂದ ವಿಚಾರಹಾಗೂ ಆ ಪತ್ರದಲ್ಲಿ ರಾಜೀನಾಮೆಗೆ ನಿರ್ದಿಷ್ಟ ಕಾರಣಗಳನ್ನು ನೀಡದ ಬಗ್ಗೆ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆಮಾಡಿರುವ ಫೇಸ್ ಬುಕ್ ಪೋಸ್ಟ್ ಒಂದು ವೈರಲ್ ಆಗಿದ್ದು ಆ ರಾಜೀನಾಮೆ ಪತ್ರದ ಬಗ್ಗೆ ಹಲವರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ ಕೂಡ. ಅದಕ್ಕೆ ಕಾರಣವೇನೆಂದು ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗದೇ ಇರದು.

ಶಾ ತಮ್ಮ ಪೋಸ್ಟ್ ನಲ್ಲಿ ತಮ್ಮ ಕಚೇರಿಗೆ ಒಂದು ದಿನ ಇಂಗ್ಲಿಷಿನಲ್ಲಿ ಟೈಪ್ ಮಾಡಲ್ಪಟ್ಟ ಮಹಿಳಾ ಉದ್ಯೋಗಿಯೊಬ್ಬರ ರಾಜೀನಾಮೆ ಪತ್ರಬಂದಿದ್ದು ಹಾಗೂ ಆ ಪತ್ರ ನೋಡಿ ತನಗೆ ಆಶ್ಚರ್ಯವಾಗಿದ್ದನ್ನು ಬರೆದಿದ್ದಾರೆ. ನಿರುದ್ಯೋಗ ಕಾಡುತ್ತಿರುವ ಇಂದಿನ ಕಾಲದಲ್ಲಿ ರಾಜೀನಾಮೆಯನ್ನು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ಈ ಮಹಿಳೆ ಯಾಕಾಗಿ ನೀಡುತ್ತಿದ್ದಾಳೆಂದು ಅವರಿಗೆ ತಿಳಿದಿರಲಿಲ್ಲ. ಅವರು ಆ ಪತ್ರವನ್ನುಮುಂದಿನ ಅಧಿಕಾರಿಗೆ ಕಳುಹಿಸಿದ್ದರು. ಹೀಗೆ ಸುಮಾರು ಆರು ಹಂತಗಳ ಅಧಿಕಾರಿಗಳ ಬಳಿ ಹೋಗಿ ಆ ಪತ್ರ ಒಂದು ದಿನ ತಮ್ಮ ಬಳಿ ಬಂದು ತಾನು ಅದನ್ನು ಪರಿಶೀಲಿಸುತ್ತಿದ್ದಾಗ ಧುತ್ತೆಂದು ತಮ್ಮ ಚೇಂಬರಿನ ಬಾಗಿಲು ತೆರೆದು ಮಹಿಳೆಯೊಬ್ಬಳು ಒಳ ಪ್ರವೇಶಿಸಿ ತಮ್ಮ ಕೈಯಲ್ಲಿದ್ದ ಕಡತ ಎಳೆದು ಅದರ ಕಾಗದಗಳನ್ನು ಹರಿದು ಚೂರು ಮಾಡಿ ನೆಲದಲ್ಲಿ ಕುಳಿತು ಜೋರಾಗಿ ಅಳಲಾರಂಭಿಸಿದ್ದಳೆಂದು ಶಾ ಬರೆದಿದ್ದಾರೆ.

ತನ್ನ ಸಹೋದ್ಯೋಗಿಗಳನ್ನು ಕರೆದ ಶಾ ಆಕೆಗೆ ನೀರು ಕುಡಿಸಿ ಆಕೆ ಸಾವರಿಸಿಕೊಂಡ ನಂತರ ಏನಾಯಿತೆಂದು ಕೇಳಿದಾಗ ‘‘ಆ ರಾಜೀನಾಮೆ ಪತ್ರ ನಾನು ಕಳುಹಿಸಿಲ್ಲ, ನನ್ನ ಪತಿ ಕಳುಹಿಸಿದ್ದು’ ಎಂದು ಹೇಳಿದಾಗ ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯವಾಗಿತ್ತು ಎಂದು ಶಾ ಬರೆದಿದ್ದಾರೆ. ಆಕೆಯನ್ನು ಮತ್ತೂ ವಿಚಾರಿಸಿದಾಗ ತನ್ನ ಪತಿ ನಿರುದ್ಯೋಗಿಯೆಂದೂ ತಾನೂ ಉದ್ಯೋಗ ಮಾಡಬಾರದೆಂದು ಆತಬಯಸಿದ್ದು ಆದರೆ ತಾನು ತನ್ನ ಮಕ್ಕಳಿಗಾದರೂ ಉದ್ಯೋಗ ಮಾಡಬೇಕೆಂದು ಇಚ್ಛಿಸುವುದಾಗಿ ಹೇಳಿದ್ದಳೆಂದು ಶಾ ತಮ್ಮ ಪೋಸ್ಟ್ ನಲ್ಲಿ ನೆನಪಿಸಿಕೊಂಡಿದ್ದಾರೆ.

ಕಚೇರಿಯಲ್ಲಿದ್ದ ಪುರುಷರೆಲ್ಲರಿಗೂ ಒಂದು ವಿಧದಲ್ಲಿ ಮುಜುಗರ ಸೃಷ್ಟಿಯಾಗಿತ್ತು. ಒಂದಲ್ಲ ಒಂದು ಹಂತದಲ್ಲಿ ಮಹಿಳೆಯರು ತಮಗಿಂತ ವೃತ್ತಿಯಲ್ಲಿ ಮೇಲುಗೈ ಸಾಧಿಸುತ್ತಾರೆಂಬ ಭಯ ಪುರುಷರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುತ್ತದೆ ಎಂದು ಶಾ ಬರೆದಿದ್ದಾರೆ ಹಾಗೂ ಈ ಘಟನೆಯಿಂದ ಎಲ್ಲರಿಗೂ ಪಾಠ ಕಲಿಯಲಿದೆ ಎಂದಿದ್ದಾರೆ.

ಮೇಲಾಗಿ ಆ ಮಹಿಳೆಗೆ ಈ ರಾಜೀನಾಮೆ ಪತ್ರದ ಬಗ್ಗೆ ಸರಿಯಾದ ಸಮಯಕ್ಕೆ ತಿಳಿದು ಬಂದಿದ್ದು ಅದೃಷ್ಟ ಎಂದೂ ಶಾ ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News