ಮರೀನಾ ಬೀಚ್‌ನಲ್ಲಿ ಜಯಲಲಿತಾ ಸಮಾಧಿಗೆ ಸಿದ್ಧತೆ

Update: 2016-12-06 11:07 GMT

 ಚೆನ್ನೈ, ಡಿ.6: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾರ ಪಾರ್ಥಿವ ಶರೀರವನ್ನು ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡದೇ ದಫನ ಮಾಡಲು ನಿರ್ಧರಿಸಲಾಗಿದೆ.

ಮರೀನಾ ಬೀಚ್‌ನಲ್ಲಿರುವ ಎಂಜಿಆರ್ ಸಮಾಧಿಯ ಹಿಂಭಾಗದಲ್ಲಿ ಜಯಲಲಿತಾರನ್ನು ಸಮಾಧಿ ಮಾಡಲು ಸಕಲ ತಯಾರಿ ನಡೆದಿದೆ. ಅಂತ್ಯಕ್ರಿಯೆ ಸಂಜೆ 4:30ರ ಬಳಿಕ ನಡೆಯಲಿದೆ. ಪಿಡಬ್ಲುಡಿ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಸಿದ್ಧತೆ ನಡೆದವು.

ಜಯಲಲಿತಾರ ಸಮಾಧಿಗೆ ಗುಂಡಿಯನ್ನು ತೋಡಲಾಗಿದೆ. ಸೋಮವಾರ ರಾತ್ರಿ ಅಪೋಲೊ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಜಯಲಲಿತಾರನ್ನು ಎಐಎಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಸಮಾಧಿ ಹಿಂಭಾಗದಲ್ಲಿ ಸಮಾಧಿ ಮಾಡಲಾಗುತ್ತದೆ.

ಜಯಲಲಿತಾರ ಅಂತ್ಯಕ್ರಿಯೆ ಯಾವ ಪ್ರಕಾರದಲ್ಲಿ ನಡೆಸಬೇಕೆಂಬ ಬಗ್ಗೆ ಗೊಂದಲವಿತ್ತು. ಜಯಲಲಿತಾರನ್ನು ಪಕ್ಷದ ಸಂಸ್ಥಾಪಕ ಎಂಜಿಆರ್ ಸಮಾಧಿಯ ಬಳಿಯಲ್ಲಿಯೇ ದಫನ ಮಾಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿತು. ಈ ನಿಟ್ಟಿಯಲ್ಲಿ ಸಮಾಧಿ ಸಿದ್ಧತೆಗೆ ಜೆಸಿಬಿಯನ್ನು ಸಿದ್ಧಪಡಿಸಿತು ಎಂದು ಮೂಲಗಳು ತಿಳಿಸಿವೆ.

ಮರೀನಾ ಬೀಚ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಗೆ ಸಮಾಧಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ದರ್ಶನಕ್ಕೆ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News