ಮಗಳ ಮದುವೆಗೆ ಬ್ಯಾಂಕಿನಿಂದ ಹಣ ಸಿಗದ ನಿವೃತ್ತ ಸೈನಿಕ ಮೃತ್ಯು !

Update: 2016-12-06 10:39 GMT

ತರಣ್‌ತಾರಣ್, (ಪಂಜಾಬ್), ಡಿ. 6: ನೋಟ್‌ ಅಮಾನ್ಯದಿಂದಾಗಿ ಬ್ಯಾಂಕ್‌ನ ಹೊರಗೆ ಸರತಿ ಸಾಲು ನಿಂತು ಕೊನೆಗೂ ಹಣ ಸಿಗದ ದುಃಖದಲ್ಲಿ ನಿವೃತ್ತ ಸೈನಿಕರೊಬ್ಬರು ಮೃತರಾದ ಘಟನೆ ಪಂಜಾಬ್‌ನಿಂದ ವರದಿಯಾಗಿದೆ. ಮೃತ ವ್ಯಕ್ತಿಯನ್ನು ನಿವೃತ್ತ ಸೈನಿಕ ಹಾಗೂ ರೈತ ಗುರ್ನಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಗುರ್ನಾಮ್ ಸಿಂಗ್‌ರ ಪುತ್ರ ಸಹೋದರಿಯ ಮದುವೆಗೆ ಹಣಸಿಗದ ದುಃಖದಲ್ಲಿ ತಂದೆ ತೀರಿಹೋಗಿದ್ದಾರೆಂದು ಹೇಳಿದ್ದಾರೆ.

ಸ್ತೋಕ್ ಹವೇಲಿಯಾಂ ಎಂಬಲ್ಲಿನ ನಿವಾಸಿ ಗುರ್ನಾಮ್ ಸಿಂಗ್‌ರ ಮಗಳ ಮದುವೆ ಡಿಸೆಂಬರ್ ಹತ್ತಕ್ಕೆ ನಡೆಯಲಿತ್ತು. ಮಗಳ ಮದುವೆಯ ಚಿಂತೆ ಅವರ ತಲೆಯಲ್ಲಿತ್ತು. ದಿನಾಲೂ 9:30ಕ್ಕೆ ಹಣಕ್ಕಾಗಿ ಬ್ಯಾಂಕ್‌ಗೆ ಹೋಗಿ ಕ್ಯೂ ನಿಲ್ಲುತ್ತಿದ್ದರು. ಆದರೆ ಹಣ ಸಿಗುತ್ತಿರಲಿಲ್ಲ. ಇದೇ ದುಃಖದಲ್ಲಿ ತಂದೆ ನಿಧನರಾಗಿದ್ದಾರೆಂದು ಅವರು ಪುತ್ರ ಮನ್‌ಜಿತ್‌ಸಿಂಗ್ ಹೇಳಿದ್ದಾರೆ.

ಸರಕಾರದ ತಪ್ಪು ನೀತಿ ತನ್ನ ಕುಟುಂಬವನ್ನು ನಾಶಪಡಿಸಿದೆ. ಬ್ಯಾಂಕ್ ಮ್ಯಾನೇಜರ್‌ರಿಗೆ ಸಹೋದರಿಯ ಮದುವೆ ಇದೆ ಎಂದು ತಿಳಿಸಿ ಆವಶ್ಯಕ ವಿಧಿವಿಧಾನಗಳನ್ನು ಪೂರೈಸಿದ್ದರು ಹಣ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News