ದೀಪಾವಳಿ ಅಂಚೆ ಚೀಟಿಗೆ 20 ದೇಶಗಳ ಬೆಂಬಲ

Update: 2016-12-06 14:57 GMT

ವಿಶ್ವಸಂಸ್ಥೆ, ಡಿ. 6: ಅಮೆರಿಕ ದೀಪಾವಳಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದನ್ನು ಮನ್ನಿಸಿ ಭಾರತ ಏರ್ಪಡಿಸಿರುವ ಸಮರ್ಪಣಾ ಕಾರ್ಯಕ್ರಮಕ್ಕೆ 20ಕ್ಕೂ ಹೆಚ್ಚು ದೇಶಗಳು ಬೆಂಬಲ ನೀಡಿವೆ. ಈ ದೇಶಗಳ ಪೈಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ದೇಶಗಳಾದ ಫ್ರಾನ್ಸ್ ಮತ್ತು ಬ್ರಿಟನ್‌ಗಳೂ ಸೇರಿವೆ.

‘ದೀಪಾವಳಿ ಫಾರೆವರ್ ಸ್ಟಾಂಪ್’ ಬಹುಸಂಸ್ಕೃತಿ ಆಚರಣೆಗೆ ನೀಡಲಾಗಿರುವ ಸೂಕ್ತ ಮನ್ನಣೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ನಿನ್ನೆ ಹೇಳಿದರು.

‘‘ದೀಪಾವಳಿಯನ್ನು ವಿವಿಧ ಸಮುದಾಯಗಳು ವಿವಿಧ ಕಾರಣಗಳಿಗಾಗಿ ಆಚರಿಸಿದರೂ, ಅದರ ಮೂಲ ತತ್ವ ಕೆಡುಕಿನ ವಿರುದ್ಧ ಒಳಿತಿನ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವಾಗಿದೆ’’ ಎಂದು ಅವರು ನುಡಿದರು.

ಭಾರತೀಯ-ಅಮೆರಿಕನ್ ಸಮುದಾಯ ಮತ್ತು ಅಮೆರಿಕದ ಪ್ರಭಾವಿ ಸಂಸದರ ಏಳು ವರ್ಷಗಳ ಪ್ರಯತ್ನಗಳ ಫಲವಾಗಿ ಅಮೆರಿಕ ಅಂಚೆ ಇಲಾಖೆ ದೀಪಾವಳಿ ಹಬ್ಬವನ್ನು ಬಿಂಬಿಸುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News