×
Ad

ಶೀಘ್ರವೇ 100 ರೂಪಾಯಿ ಹೊಸ ನೋಟು

Update: 2016-12-07 09:31 IST

ಮುಂಬೈ, ಡಿ.7: ಭಾರತೀಯ ರಿಸರ್ವ್ ಬ್ಯಾಂಕ್ 100 ರೂಪಾಯಿಯ ಹೊಸನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ. ನೋಟಿನ ಎರಡೂ ಬದಿಗಳಲ್ಲಿ ಕೆಲ ಬದಲಾವಣೆಗಳಿರುತ್ತವೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಅದಾಗ್ಯೂ 100 ರೂಪಾಯಿಯ ಹಳೆಯ ನೋಟುಗಳ ಚಲಾವಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

"ಮಹಾತ್ಮಗಾಂಧಿ ಸರಣಿ-2005ರ ನೋಟು ಇದಾಗಿದ್ದು, ಎರಡೂ ಬದಿಗಳಲ್ಲಿ ಸಂಖ್ಯೆ ನಮೂದಿಸಿದ ಜಾಗದಲ್ಲಿ ಅಂತರ್ಗತ ಅಕ್ಷರಗಳು ಇರುವುದಿಲ್ಲ. ಹೊಸ ನೋಟುಗಳಲ್ಲಿ ನೂತನ ಆರ್ ಬಿಐ ಗವರ್ನರ್ ಊರ್ಜಿತ್ ಆರ್.ಪಟೇಲ್ ಅವರ ಸಹಿ ಇರುತ್ತದೆ. ನೋಟು ಮುದ್ರಣದ ವರ್ಷ 2016 ಎಂದಿರುತ್ತದೆ ಎಂದು ಪ್ರಕಟಣೆ ವಿವರಿಸಿದೆ.

ಹಾಲಿ ಇರುವ 100 ರೂಪಾಯಿ ನೋಟಿನ ವಿನ್ಯಾಸವನ್ನೇ ಹೊಸ ನೋಟು ಕೂಡ ಹೊಂದಿರುತ್ತದೆ. 2005ರ ಬಳಿಕ ಬಿಡುಗಡೆ ಮಾಡಲಾದ ನೋಟುಗಳಂತೆ ದಪ್ಪ ಅಕ್ಷರಗಳ ಸಂಖ್ಯೆ, ಬ್ಲೀಡ್ ಲೈನ್, ಗುರುತಿನ ಸಂಕೇತ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News