×
Ad

ಹಳಿ ತಪ್ಪಿದ ಕ್ಯಾಪಿಟಲ್ ಎಕ್ಸ್‌ಪ್ರೆಸ್ :ಇಬ್ಬರು ಮೃತ, ಹಲವರಿಗೆ ಗಾಯ

Update: 2016-12-07 10:16 IST

 ಹೊಸದಿಲ್ಲಿ, ಡಿ.7: ಬಿಹಾರದ ರಾಜೇಂದ್ರ ನಗರದಿಂದ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದ ಕ್ಯಾಪಿಟಲ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಪಶ್ಚಿಮ ಬಂಗಾಳ-ಗುವಾಹಟಿಯ ನಡುವೆ ಮಂಗಳವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 34 ಮಂದಿ ಗಾಯಗೊಂಡಿದ್ದಾರೆ. ಘಟನೆಯು ಗುವಾಹಟಿಯ ಅಲಿಪುರ್‌ದುರ್ ಜಿಲ್ಲೆಯ ಸಮುಕ್ತಲಾ ರೋಡ್ ಸ್ಟೇಶನ್‌ನಲ್ಲಿ ರಾತ್ರಿ 9ಕ್ಕೆ ಈ ಘಟನೆ ನಡೆದಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಗುವಾಹಟಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಎಂಜಿನ್ ಹಾಗೂ ಕೋಚ್ ಹಳಿ ತಪ್ಪಿತ್ತು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
 ಎರಡು ವಾರಗಳ ಹಿಂದೆ ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ 14 ಕೋಚ್‌ಗಳು ಹಳಿ ತಪ್ಪಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News