ದಿಲ್ಲಿಯಲ್ಲಿ ರೈಲು, ವಿಮಾನ ಸಂಚಾರಕ್ಕೆ ಅಡ್ಡಿಯಾದ 'ಮಂಜು'
ಹೊಸದಿಲ್ಲಿ, ಡಿ.7: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಬೆಳಗ್ಗೆ ಆವರಿಸಿದ ದಟ್ಟ ಮಂಜಿನಿಂದಾಗಿ ಕನಿಷ್ಠ ಮೂರು ರೈಲುಗಳು ರದ್ಧುಗೊಂಡಿದ್ದರೆ, ಇತರ 81 ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಗರಿ ಎಕ್ಸ್‌ಪ್ರೆಸ್(26 ಗಂಟೆ), ಅಮರನಾಥ್ ಎಕ್ಸ್‌ಪ್ರೆಸ್(20 ಗಂಟೆ), ಪುರ್ಬಿಯ ಎಕ್ಸ್‌ಪ್ರೆಸ್(18 ಗಂಟೆ), ಕಾಲಿಫತ್ ಎಕ್ಸ್‌ಪ್ರೆಸ್(19 ಗಂಟೆ), ಅವಧ್-ಅಸ್ಸಾಂ ಎಕ್ಸ್‌ಪ್ರೆಸ್,ಪಂಜಾಬ್ ಮೈಲ್, ಕೋಟಾ-ಪಾಟ್ನಾ ಎಕ್ಸ್‌ಪ್ರೆಸ್, ಬಿಹಾರ್ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್, ಗರೀಬ್ ರಥ, ತ್ರಿವೇಣಿ ಎಕ್ಸ್‌ಪ್ರೆಸ್ ಸಹಿತ ಇನ್ನಿತರ ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ.
ದಟ್ಟ ಮಂಜಿನಿಂದಾಗಿ ಬುಧವಾರ ಬೆಳಗ್ಗೆ ಕೆಲವು ವಿಮಾನಗಳ ಯಾನವನ್ನು ರದ್ದು ಪಡಿಸಲಾಗಿದೆ. ಐದು ದೇಶೀಯ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸುತ್ತಿವೆ. ರಸ್ತೆ ಸಂಚಾರದ ಮೇಲೂ ದಟ್ಟ ಮಂಜು ಪರಿಣಾಮ ಬೀರಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ.
ದಿಲ್ಲಿಯಲ್ಲಿ ಕನಿಷ್ಠ ಉಷ್ಣಾಂಶ 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 8:30ಕ್ಕೆ ಶೇ.98ರಷ್ಟು ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.