ಶಶಿ ತರೂರ್ ದಿಲ್ಲಿ ಮನೆಯಲ್ಲಿ ಕಳ್ಳತನ
ಹೊಸದಿಲ್ಲಿ, ಡಿ. 7: ಕಾಂಗ್ರೆಸ್ ಸಂಸದ ಶಶಿ ತರೂರ್‌ರ ದಿಲ್ಲಿಯ ಮನೆಯಲ್ಲಿ ಕಳ್ಳತನವಾಗಿದ್ದು, ಹಲವಾರು ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆಂದು ವರದಿಯಾಗಿದೆ.
ಕಳ್ಳತನ ಕಳೆದ ತಿಂಗಳು 29ಕ್ಕೆ ನಡೆದಿದೆ. ತರೂರ್‌ರ ಮನೆಯ ಗೋಡೆ ಹಾರಿ ಬಂದಿದ್ದ ತಂಡ ಕಚೇರಿ ಕೋಣೆಯನ್ನು ಪುಡಿಗುಟ್ಟಿ ಕಳ್ಳತನ ಮಾಡಿದೆ ಎನ್ನಲಾಗಿದೆ. ಹಲವಾರು ಉನ್ನತ ವ್ಯಕ್ತಿಗಳು ವಾಸವಿರುವ ಲೋಧಿ ಎಸ್ಟೇಟ್‌ನಲ್ಲಿ ಈ ಕಳ್ಳತನ ನಡೆದಿದೆ.
ತನ್ನ ಮನೆಯ ಸಮೀಪ ಪಟ್ರೋಲಿಂಗ್ ಬಲಪಡಿಸಬೇಕೆಂದು ತರೂರ್ ದಿಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಂತರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿತ್ತು. ಇದೇವೇಳೆ ಕಳ್ಳತನ ನಡೆದಿದೆ. ಬೆಲೆಬಾಳುವ ವಿಗ್ರಹಗಳು ಕದ್ದುಹೋಗಿವೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿಯ ಸ್ವಚ್ಛಭಾರತ್ ಅಭಿಯಾನದಲ್ಲಿ ಭಾಗವಹಿಸಿದಕ್ಕಾಗಿ ಮೋದಿ ಸನ್ಮಾನಿಸಿ ನೀಡಿದ್ದ ಗಾಂಧಿ ಕನ್ನಡಕ ಕಳವಾಗಿದೆ. ಹನ್ನೆರಡು ಗಣೇಶ ವಿಗ್ರಹಗಳು, ಹತ್ತು ಹನುಮಾನ್ ವಿಗ್ರಹಗಳು ನಟರಾಜ ವಿಗ್ರಹಗಳನ್ನು ಕದ್ದೊಯ್ದಿದ್ದಾರೆ ಎಂದು ವರದಿ ತಿಳಿಸಿದೆ.