ಕೇರಳ ಸರಕಾರಕ್ಕೆ ಎಚ್ಚರಿಕೆ ನೀಡಿದ ಅಚ್ಯುತಾನಂದನ್

Update: 2016-12-07 12:14 GMT

ತಿರುವನಂತಪುರಂ, ಡಿಸೆಂಬರ್ 7: ಅನಧಿಕೃತ ಕಟ್ಟಡಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವ ಸರಕಾರದ ನಿಲುವಿನ ವಿರುದ್ಧ ವಿಎಸ್ ಅಚ್ಯುತಾನಂದನ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ದಂಡ ವಿಧಿಸಿ ಅನಧಿಕೃತ ನಿರ್ಮಾಣಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ.ಹೀಗೆ ಅನುಮತಿ ನೀಡುವುದರಿಂದ ಮುಂದಕ್ಕೆ ಸಮಸ್ಯೆಗಳು ಉದ್ಭವಿಸಬಹುದು ಎಂದು ವಿ.ಎಸ್ ಅಚ್ಯುತಾನಂದನ್ ಮುನ್ನೆಚ್ಚರಿಕೆ ನೀಡಿದ್ದಾರೆ.

ಕೃಷಿ ನಿಯಮಗಳನ್ನು ಮೀರಿದವರಿಗೆ ಯಾವ ಕಾರಣಕ್ಕೂ ರಿಯಾಯಿತಿ ತೋರಬಾರದು. ದಂಡ ವಿಧಿಸಿ ಸಕ್ರಮಗೊಳಿಸುವುದರಿಂದ ಅನಧಿಕೃತ ನಿರ್ಮಾಣಕಾರ್ಯಗಳನ್ನು ಪ್ರೋತ್ಸಾಹಿಸಿದಂತಾಗುವುದು. ಯುಡಿಎಫ್ ಸರಕಾರ ಕಾಲದಲ್ಲಿ ಇಂತಹ ಕ್ರಮಗಳನ್ನು ತಾನು ವಿರೋಧಿಸಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮರಡ್‌ನ ಡಿ.ಎಲ್.ಎಫ್ ಪ್ಲಾಟ್, ಮೂನ್ನಾರ್‌ನ ಕಾಪಿಕೊ ರೆಸಾರ್ಟ್ ಇವು ಎಲ್ಲ ವಿಧಿವಿಧಾನಗಳನ್ನು ಮೀರಿ ನಿರ್ಮಿಸಿದ ಬೃಹತ್ ರೆಸಾರ್ಟ್‌ಗಳಾಗಿವೆ. ಇವುಗಳಿಗೆ ಅಂಗೀಕಾರವನ್ನು ನೀಡಬಾರದೆಂದು ಅಚ್ಯುತಾನಂದನ್ ಸರಕಾರವನ್ನು ಎಚ್ಚರಿಸಿದ್ದಾರೆ. ಭಾರೀ ಮೊತ್ತ ದಂಡ ವಿಧಿಸಿ ಸಕ್ರಮಗೊಳಿಸುವ ಕ್ರಮ ಸ್ಥಳೀಯಾಡಳಿತ ಖಾತೆಯಲ್ಲಿ ನಡೆಯುತ್ತಿರುವಂತೆಯೇ ವಿಎಸ್‌ರಿಂದ ಈ ಎಚ್ಚರಿಕೆಯ ಹೇಳಿಕೆಹೊರ ಬಂದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News