×
Ad

ಜನಾಂಗೀಯ ನಿಂದಕ ‘ನಿಗರ್’ ಪದ ಕೈಬಿಟ್ಟ ನ್ಯೂಝಿಲ್ಯಾಂಡ್

Update: 2016-12-08 20:14 IST

ವೆಲಿಂಗ್ಟನ್, ಡಿ. 8: ಕಪ್ಪು ವರ್ಣೀಯರನ್ನು ಅವಹೇಳನಕಾರಿ ರೀತಿಯಲ್ಲಿ ಸಂಬೋಧಿಸಲು ಬಳಸುವ ‘ನಿಗರ್’ ಎಂಬ ಪದದ ಬಳಕೆಯನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ನ್ಯೂಝಿಲ್ಯಾಂಡ್ ಸರಕಾರ ಗುರುವಾರ ಹೇಳಿದೆ.

 ಸೌತ್ ಐಲ್ಯಾಂಡ್‌ನ ಸದರ್ನ್ ಆಲ್ಪ್ಸ್‌ನಲ್ಲಿರುವ ಮೂರು ಸ್ಥಳಗಳ ಹೆಸರುಗಳನ್ನೂ ಬುಡಕಟ್ಟು ಮಾವೊರಿ ಭಾಷೆಯಿಂದ ಪಡೆದ ಪದಗಳನ್ನು ಬಳಸಿ ಬದಲಿಸಲಾಗಿದೆ.

‘ನಿಗರ್ ಸ್ಟ್ರೀಮ್’ ಎಂಬ ಸ್ಥಳವನ್ನು ಇನ್ನು ‘ಪುಕಿಯೊ ಸ್ಟ್ರೀಮ್’ ಎಂದು ಕರೆಯಲಾಗುವುದು. ಅದೇ ವೇಳೆ, ‘ನಿಗರ್‌ಹೆಡ್’ ‘ತವ್ಹಾಯಿ ಹಿಲ್’ ಮತ್ತು ‘ನಿಗರ್ ಹಿಲ್’ ‘ಕನುಕ ಹಿಲ್ಸ್’ ಆಗಲಿದೆ ಎಂದು ಕಂದಾಯ ಸಚಿವೆ ಲೂಯಿಸ್ ಅಪ್‌ಸ್ಟನ್ ತಿಳಿಸಿದರು.

‘‘ಅದು ಇಂದಿನ ಹೆಚ್ಚಿನ ಜನರಿಗೆ ಸ್ಪಷ್ಟವಾಗಿ ಅವಹೇಳನಕಾರಿ ಪದವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News