ನಾಲ್ಕನೆ ಟೆಸ್ಟ್: ಇಂಗ್ಲೆಂಡ್ 400, ಭಾರತ 146/1
ಮುಂಬೈ, ಡಿ.9: ಇಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಇಂದು 400 ರನ್‌ಗಳಿಗೆ ಆಲೌಟಾಗಿದೆ. ಭಾರತ ಮೊದಲ ಇನಿಂಗ್ಸ್ ಆರಂಭಿಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನದಾಟದಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 52 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 146 ರನ ಗಳಿಸಿದೆ.
70 ರನ್ ಗಳಿಸಿರುವ ಮುರಳಿ ವಿಜಯ್ ಮತ್ತು 47 ರನ್ ಗಳಿಸಿರುವ ಚೇತೇಶ್ವರ ಪೂಜಾರ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಆರಂಭಿಕ ದಾಂಡಿಗ ಕೆಎಲ್ ರಾಹುಲ್ 24 ರನ್ ಗಳಿಸಿ ಔಟಾಗಿದ್ದಾರೆ.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ 130.1 ಓವರ್‌ಗಳಲ್ಲಿ 400 ರನ್‌ಗಳಿಗೆ ಆಲೌಟಾಗಿದೆ. ಭಾರತದ ಆರ್ ಅಶ್ವಿನ್ 112ಕ್ಕೆ 6 ಮತ್ತು ರವೀಂದ್ರ ಜಡೇಜ 109ಕ್ಕೆ 4 ವಿಕೆಟ್ ಪಡೆದರು.
ಗುರುವಾರ ದಿನದಾಟದಂತ್ಯಕ್ಕೆ 94 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 288 ರನ್ ಮಾಡಿದ್ದ ಇಂಗ್ಲೆಂಡ್ ಈ ಮೊತ್ತಕ್ಕೆ 112 ರನ್ ಸೇರಿಸಿತು. ಬೆನ್ ಸ್ಟೋಕ್ಸ್ 31 ರನ್, ಜೋಶ್ ಬಟ್ಲರ್ 76 ರನ್, ವೋಕ್ಸ್ 11ರನ್, ಆದಿಲ್ ರಶೀದ್ 4ರನ್, ಜಾಕ್ ಬಾಲ್ 31ರನ್ ಗಳಿಸಿ ಔಟಾದರು.
.