×
Ad

'ಅಮ್ಮ'ನ ಅಗಲಿಕೆಯ ಆಘಾತದಿಂದ 280 ಜನರ ಸಾವು: ಎಡಿಎಂಕೆ

Update: 2016-12-10 23:54 IST

 ಚೆನ್ನೈ,ಡಿ.10: 203 ಮೃತವ್ಯಕ್ತಿಗಳ ಪಟ್ಟಿಯೊಂದನ್ನು ಇಂದು ಬಿಡುಗಡೆ ಮಾಡಿರುವ ಎಡಿಎಂಕೆ, ಇವರೆಲ್ಲ ಪಕ್ಷದ ಮುಖ್ಯಸ್ಥೆ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ಆಘಾತವನ್ನು ತಾಳಲಾರದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇದರೊಂದಿಗೆ ಜಯಲಲಿ ತಾರ ನಿಧನದ ಬಳಿಕ ಮೃತರಾದವರ ಸಂಖ್ಯೆ 280ಕ್ಕೇರಿದೆ.

ಚೆನ್ನೈ, ವೆಲ್ಲೂರು, ತಿರುವಳ್ಳೂರು, ತಿರುವಣ್ಣಾಮಲೈ, ಕುಡ್ಡಲೂರು, ಕೃಷ್ಣಗಿರಿ, ಈರೋಡ್ ಮತ್ತು ತಿರ್ಪುರ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಇಂತಹ 203 ಮೃತವ್ಯಕ್ತಿಗಳ ಹೆಸರುಗಳು ಎಡಿಎಂಕೆ ಕೇಂದ್ರಕಚೇರಿಯು ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿವೆ. ಮೃತರಿಗೆ ಸಂತಾಪಗಳನ್ನು ಸೂಚಿಸಿರುವ ಪಕ್ಷವು ಅವರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ.ಪರಿಹಾರವನ್ನು ನೀಡಲಾಗುವುದು ಎಂದು ಪ್ರಕಟಿಸಿದೆ.
ಜಯಲಲಿತಾರ ನಿಧನದ ದುಃಖ ಮತ್ತು ಆಘಾತವನ್ನು ತಡೆಯಲಾಗದೆ 77 ಜನರು ಸಾವನ್ನಪ್ಪಿದ್ದರೆಂದು ಈ ಮೊದಲು ತಿಳಿಸಿದ್ದ ಪಕ್ಷವು ಅವರ ಕುಟುಂಬಗಳಿಗೂ ತಲಾ ಮೂರು ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News