×
Ad

ಚಿನ್ನ, ಬೆಳ್ಳಿ ದರ ಕುಸಿತ

Update: 2016-12-10 23:54 IST

ಹೊಸದಿಲ್ಲಿ, ಡಿ.10: ವಿದೇಶದಲ್ಲಿ ದರ ಕುಸಿತ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ 130 ರೂ. ಕುಸಿತವಾಗಿದ್ದು ಕಳೆದ 10 ತಿಂಗ ಳಲ್ಲೇ ಕನಿಷ್ಠ ದರವಾದ 28,450 ರೂ.(10 ಗ್ರಾಮ್‌ಗಳಿಗೆ) ಗೆ ಇಳಿದಿದೆ. ನಾಣ್ಯ ತಯಾರಕರಿಂದ ಮತ್ತು ಕೈಗಾರಿಕಾ ಘಟಕ ಗಳಿಂದ ಬೇಡಿಕೆ ಕಡಿಮೆಯಾಗಿರುವ ಕಾರಣ ಬೆಳ್ಳಿ ದರದಲ್ಲೂ 600 ರೂ. ಕುಸಿತವಾಗಿದ್ದು ಕಿ.ಗ್ರಾಂಗೆ 41,250 ರೂ. ತಲುಪಿದೆ.
    

ನೋಟು ಅಮಾನ್ಯ ನಿರ್ಧಾರದಿಂದ ತಲೆದೋರಿರುವ ಹಣದ ಕೊರತೆಯ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ವ್ಯಾಪಾರಿಗಳಿಂದ ಮತ್ತು ರಖಂ ವ್ಯಾಪಾರಿಗಳಿಂದ ಬೇಡಿಕೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದು ಚಿನ್ನದ ಬೆಲೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News