×
Ad

ಕ್ಯಾಲಿಕಟ್‌ನಿಂದ ರಿಯಾದ್‌ಗೆ ಜನವರಿಯಿಂದ ಪ್ರತಿದಿನ ವಿಮಾನ

Update: 2016-12-11 12:53 IST

ಕೊಂಡೊಟ್ಟಿ, ಡಿ. 11: ಡಿಸೆಂಬರ್ 2ರಿಂದ ಕ್ಯಾಲಿಕಟ್ ವಿಮಾನನಿಲ್ದಾಣದಿಂದ ಆರಂಭಿಸಲಾಗಿರುವ ರಿಯಾದ್ ವಿಮಾನಯಾನವನ್ನು ಜನವರಿಯಿಂದ ಪ್ರತಿದಿವಸವೂ ನಡೆಸಲಾಗುವುದು ಎಂದು ವರದಿಯಾಗಿದೆ. ಕ್ಯಾಲಿಕಟ್-ರಿಯಾದ್ ಸೆಕ್ಟರ್‌ನಲ್ಲಿ ಏರ್‌ಇಂಡಿಯ ಎಕ್ಸ್‌ಪ್ರೆಸ್ ಸರ್ವೀಸ್ ಆರಂಭಿಸಿದೆ. ಈಗ ವಾರಕ್ಕೆ ನಾಲ್ಕುದಿವಸಗಳಲ್ಲಿ ಮಾತ್ರ ವಿಮಾನಸರ್ವೀಸ್ ಇದೆ. ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಪ್ರತಿದಿನಾಲೂ ವಿಮಾನ ಸರ್ವೀಸ್ ನಡೆಸಲಾಗುತ್ತದೆ.

ಇದಕ್ಕೆ ಅಗತ್ಯವಿರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ ಮಧ್ಯಂತರದ ವೇಳೆ ಪ್ರತಿದಿನಾಲೂ ಸರ್ವೀಸ್ ಆರಂಭಿಸಲು ಸಾಧ್ಯವಾಗಬಹುದೆಂದು ಅವರು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು, ಈಗ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರಗಳಲ್ಲಿ ಮಾತ್ರವೇ ವಿಮಾನ ಸರ್ವೀಸ್ ಇದೆ. ಕ್ಯಾಲಿಕಟ್‌ನಿಂದ 9:15ಕ್ಕೆ ಹೊರಡುವ ವಿಮಾನ ರಿಯಾದ್ ಸಮಯ 11:45ಕ್ಕೆ ಅಲ್ಲಿಗೆ ತಲುಪುತ್ತದೆ. 189 ಪ್ರಯಾಣಿಕರು ಸಂಚರಿಸಬಹುದಾದ ಬಿ737-800 ವಿಮಾನವನ್ನು ಈ ಸರ್ವೀಸ್‌ಗೆ ಈಗ ಬಳಸಲಾಗುತ್ತಿದೆ. ಮತ್ತು ಇದರಲ್ಲಿ 20ಕೆ.ಜಿ.ಬ್ಯಾಗೇಜ್ ಮತ್ತು ಏಳು ಕೆ.ಜಿ. ಹ್ಯಾಂಡ್ ಬ್ಯಾಗ್‌ನ್ನು ಕೊಂಡೊಯ್ಯುವುದಕ್ಕೆ ಅನುಮತಿ ಇದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News