×
Ad

ನಿಲಂಬೂರ್ ಕಾಡಿನಲ್ಲಿ ನಕ್ಸಲರು ಕ್ಲಾಸ್ ಮಾಡುವ ದೃಶ್ಯ ಬಹಿರಂಗ

Update: 2016-12-11 13:21 IST

ಮಲಪ್ಪುರಂ, ಡಿ. 11: ನಿಲಂಬೂರ್ ಕಾಡಿನಲ್ಲಿ ನಕ್ಸಲರು ಚರ್ಚಿಸುತ್ತಿರುವ ದೃಶ್ಯಗಳನ್ನು ಪೊಲೀಸರು ತೋರಿಸುತ್ತಿದ್ದಾರೆಂದು ವರದಿಯಾಗಿದೆ. ಸಿಪಿಐ ಮಾವೊಯಿಸ್ಟ್ ಕೇಂದ್ರಕಮಿಟಿ ಸದಸ್ಯ ಕುಪ್ಪುದೇವರಾಜ್ ಮಾತಾಡುತ್ತಿರುವ ಕೆಲವು ನಿಮಿಷಗಳ ಎರಡು ದೃಶ್ಯಗಳನ್ನು ಪೊಲೀಸ್ ಚ್ಯಾನೆಲ್ ಮೂಲಕ ಪೊಲೀಸರು ಪ್ರಸಾರ ಮಾಡಿದ್ದಾರೆ. ಗುಂಡು ಹಾರಾಟ ನಡೆದ ಸ್ಥಳದಿಂದ ಶೇಖರಿಸಿದ ಪೆನ್‌ಡ್ರೈವ್‌ನಲ್ಲಿದ್ದ ದೃಶ್ಯವನ್ನು ಪೊಲೀಸರು ಪ್ರಸಾರ ಮಾಡಿರುವ ಸಾಧ್ಯತೆ ಇದೆ.

ಸಿಪಿಐ ಮಾವೊಯಿಸ್ಟ್ ಸಂಸ್ಥಾಪನೆಯ ದಿನಾಚರಣೆಯಂದು ಈ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿರಬಹುದು. ಕುಪ್ಪುದೇವರಾಜ್ ಭಾಷಣ ಮಾಡುವುದು ದೃಶ್ಯಗಳಲ್ಲಿವೆ. ಫಾರೆಸ್ಟ್ ಅಧಿಕಾರಿಗಳನ್ನು ಅಪಹರಿಸಿ ಒತ್ತೆಸೆರೆಹಿಡಿಯಲು ಯೋಜನೆ ರೂಪಿಸಿದ ಸಾಕ್ಷ್ಯ ದೊರತಿದೆ ಎಂದುಪೊಲೀಸರು ಹೇಳುತ್ತಿದ್ದಾರೆ. ಸಶಸ್ತ್ರಧಾರಿಗಳಾಗಿರುವ ನಕ್ಸಲರು ಘೋಷಣೆ ಕೂಗುವುದು ಕೂಡಾ ದೃಶ್ಯಗಳಲ್ಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News