ಪಂಚತೀರ್ಥ-ಸಪ್ತ ಕ್ಷೇತ್ರ ರಥಯಾತ್ರೆ ತೀರ್ಥ ಸಂಗ್ರಹ

Update: 2016-12-11 18:41 GMT

ಉಪ್ಪಿನಂಗಡಿ, ಡಿ.11: ಕಳೆದ ಮೂರು ವರ್ಷಗಳಿಂದ ದ.ಕ. ಜಿಲ್ಲೆಯ ಜನತೆಯ ಕಳವಳವನ್ನು ಹಂಚಿ ಕೊಳ್ಳಲು ಮಾತುಕತೆಗೆ ಕರೆಯಿರಿ ಎಂದು ಯಾಚಿಸಿದರೂ ನಿರ್ಲಕ್ಷ ನೀತಿ ಅನುಸರಿಸುತ್ತಿರುವ ರಾಜ್ಯದ ಮುಖ್ಯ ಮಂತ್ರಿಗಳು ಮುಂಬರುವ ಜ.26ರೊಳಗಾಗಿ ದ.ಕ. ಜಿಲ್ಲೆಯ ಜನರನ್ನು ಮಾತುಕತೆಗೆ ಕರೆಯದಿದ್ದರೆ, ಬಳಿಕ ದ.ಕ. ಜಿಲ್ಲೆಯ ಪಾಲಿಗೆ ದ್ವಿತೀಯ ಸ್ವಾತಂತ್ರ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತವೆಂದು ಸಂಸದ ನಳಿನ್ ಕುಮಾರ್ ಕಟೀಲ್ ಘೋಷಿಸಿದ್ದಾರೆ.

ಅವರು ಪಂಚ ತೀರ್ಥ - ಸಪ್ತ ಕ್ಷೇತ್ರ ರಥಯಾತ್ರೆಯು ನೇತ್ರಾವತಿ, ಕುಮಾರಧಾರಾ ನದಿ ಸಂಗಮ ಸ್ಥಳದ ತೀರ್ಥಸಂಗ್ರಹಣೆಗಾಗಿ ರವಿವಾರ ಉಪ್ಪಿನಂಗಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಜಿಪಂಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಲಿಮಾರ ರಘುನಾಥ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಯೋಗೀಶ್ ಭಟ್, ಎಂ.ಜಿ. ಹೆಗಡೆ, ಅಶೋಕ್ ಕುಮಾರ್ ರೈ, ವೇದಿಕೆಯಲ್ಲಿ ಉಪಸ್ಥಿ ತರಿದ್ದರು.

ಸಭೆಗೆ ಮುನ್ನ ಬಾಲಕೃಷ್ಣ ಭಾಣ ಜಾಲು, ಅರುಣ ಕುಮಾರ್ ಪುತ್ತಿಲ, ಗೋಪಾಲಕೃಷ್ಣ ಹೇರಳೆ, ಹರೀಶ್ ಪೂಂಜ, ವಿಶ್ವನಾಥ್ ಶೆಟ್ಟಿ ಕಂಗ್ವೆ, ರಂಜನ್ ಗೌಡ, ಮುಕುಂದ ಗೌಡ, ಪುರುಷೋತ್ತಮ ಮುಂಗ್ಲಿಮನೆ, ರಾಜೇಶ್ ಬನ್ನೂರು, ಸುಮನ್ ಪಿ. ಲದ್ವಾ, ಸುಜಾತ ಕೃಷ್ಣ ಆಚಾರ್ಯ, ರಾಧಾ ನಿನ್ನಿಕ್ಕಲ್, ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇ ಶ್ವರ ದೇವಳದಲ್ಲಿ ಸಂಸದರು ದೇವಳದ ಟ್ರಸ್ಟಿಗಳಾದ ಪ್ರಕಾಶ್ ರೈ ಬೆಳ್ಳಿಪಾಡಿ, ಅರ್ತಿಲ ಕೃಷ್ಣ ರಾವ್, ಜೊತೆಗೂಡಿ ಪೂಜೆ ನೆರವೇರಿಸಿ, ನದಿ ತೀರ್ಥವನ್ನು ಕಲಸಕ್ಕೆ ತುಂಬಿಸುವ ಕಾರ್ಯ ನಡೆ ಸಲಾಯಿತು.

ಈ ಕಾರ್ಯದಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀಗಳು ಭಾಗವಹಿಸಿ ಕಲಶ ಪೂಜೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News