ಆಳ್ವಾಸ್‌ನಲ್ಲಿ ಪಿಯು ಉಪನ್ಯಾಸಕರ ತರಬೇತಿ ಸಮಾಪನ

Update: 2016-12-12 17:22 GMT

ಮೂಡುಬಿದಿರೆ, ಡಿ.12 : ಮೈಸೂರು ವಿಭಾಗ 2 ರ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಜರುಗಿತು. 

ದ.ಕ ಜೀವಶಾಸ್ತ್ರ ಜಿಲ್ಲಾ ಸಂಯೋಜಕ ಸುಕುಮಾರ ಮಾತಾನಾಡಿ, ಕಾರ್ಯಾಗಾರ ವಿಚಾರ ಮಂಥನಕ್ಕೆ ವೇದಿಕೆಯಾಗಿ, ಶಿಕ್ಷಕರ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಇಲ್ಲಿ ಕಲಿತ ಜ್ಞಾನ ತರಗತಿಯಲ್ಲಿ ಆಳವಡಿಕೆಯಾದರೆ, ಕಾರ್ಯಗಾರದ ಮೂಲ ಉದ್ದೇಶ ನೆರವೇರಿದಂತೆ ಎಂದು ತಿಳಿಸಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ ಶೆಟ್ಟಿ, ಶಿಕ್ಷಕ ಹಾಗೂ ಶಿಕ್ಷಣ ನಿಂತ ನೀರಾಗದೆ, ಪ್ರತಿದಿನ ಹೊಸತನದ ಹುಡುಕಾಟದ ದಿನಚರಿಯಾಗಬೇಕು.  ಗುಣಮಟ್ಟ ನಮ್ಮ ವ್ಯಕ್ತಿತ್ವವನ್ನು ವಿವರಿಸುವಂತಾಗಬೇಕು ಎಂದರು.

ಉಪನ್ಯಾಸಕರಾದ ನೇತ್ರಾವತಿ, ಶಶಿಧರ ಎಸ್.ವಿ, ವರ್ಗೀಸ್, ಶಶಿಕಲಾ ಕಾರ್ಯಾಗಾರದ ಕುರಿತ ಅನಿಸಿಕೆಗಳನ್ನು ಹಂಚಿಕೊಂಡರು.

ದ.ಕ ರಸಾಯಾನಶಾಸ್ತ್ರ ಸಂಯೋಜಕ ಸುರೇಶ ಉಪಸ್ಥಿತರಿದ್ದರು.

ಡಾ.ಉದಯ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

ದ.ಕ ಜೀವಶಾಸ್ತ್ರ ಜಿಲ್ಲಾ ಸಂಯೋಜಕ ವಿನಯಕುಮಾರ ಶೆಟ್ಟಿ ವಂದಿಸಿದರು.

ಕರ್ನಾಟಕ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ-ಪದವಿಪೂರ್ವ ಶಿಕ್ಷಣ ಇಲಾಖೆ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಐದು ದಿನಗಳು ಕಾರ್ಯಾಗಾರ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News