ಮುಸ್ಲಿಂ ಪ್ರದೇಶಗಳಲ್ಲಿ ಕಡಿಮೆ ಸಾಲ ವಿತರಣೆ: ಅಸದುದ್ದೀನ್ ಉವೈಸಿ
Update: 2016-12-13 19:45 IST
ಮುಂಬೈ, ಡಿ.13: ನೋಟು ರದ್ದತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ, ಮುಸ್ಲಿಂ ಪ್ರದೇಶಗಳಲ್ಲಿ ಸಾಕಷ್ಟು ಬ್ಯಾಂಕಿಂಗ್ ಜಾಲ ಕಾಣೆಯಾಗಿದೆಯೆಂದು ಪ್ರತಿಪಾದಿಸಿದ್ದಾರೆ.
ಹಲವು ಮುಸ್ಲಿಂ ಪ್ರದೇಶಗಳಲ್ಲಿ ಬ್ಯಾಂಕುಗಳು ಅವುಗಳಿರಬೇಕಾದ ರೀತಿಯಲ್ಲಿಲ್ಲ. ಸಾಲ ಹಂಚಿಕೆಯ ಪ್ರಮಾಣ ಸಹ ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆಯಿದೆಯೆಂದು ಮರಾಠವಾಡ ವಲಯದ ಲಾತೂರ್ ಜಿಲ್ಲೆಯ ಉದ್ಗೀರ್‌ನಲ್ಲಿ ನಿನ್ನೆ ನಡೆದ ಸಭೆಯೊಂದರ ಬಳಿಕ ಅವರು ಆರೋಪಿಸಿದ್ದಾರೆ.
ಅಲ್ಲಿ ಎಟಿಎಂಗಳಿಲ್ಲ. ಇದು ಅಲ್ಲಿ ನಡೆಯುತ್ತಿದೆ. ಇಡೀ ದೇಶವೇ ಸಮಸ್ಯೆಯನ್ನೆದುರಿಸುತ್ತಿದೆಯೆಂದು ಉವೈಸಿ ಹೇಳಿದ್ದಾರೆ.
ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಎಟಿಎಂಗಳು ಕಾರ್ಯಾಚರಿಸುತ್ತಿಲ್ಲ. ಒಂದು ಬ್ಯಾಂಕ್ ತೆರೆದರೆ ಅದನ್ನು ‘ಕೆಂಪು ವಲಯವೆಂದು’ ಘೋಷಿಸಲಾಗುತ್ತದೆಂದು ಹೈದರಾಬಾದ್‌ನ ಸಂಸದ ಟೀಕಿಸಿದ್ದಾರೆ.