ಡಿ.23: ಭಿನ್ನಸಾಮರ್ಥ್ಯದ ಕ್ರೀಡಾಪಟುಗಳಿಗೆ ‘ಯುನಿಫೈಡ್ ಕ್ರಿಕೆಟ್ ಮ್ಯಾಚ್’

Update: 2016-12-13 18:18 GMT

ಮಂಗಳೂರು, ಡಿ.13: ‘ಎಂಪಿಎಲ್-2016’ ಆರಂಭಗೊಳ್ಳಲಿರುವ ನವಮಂಗಳೂರು ಬಂದರು ಕ್ರೀಡಾಂಗಣದಲ್ಲಿ ಡಿ.23ರಂದು ಸಂಜೆ 6:30ಕ್ಕೆ ‘ಭಿನ್ನಸಾಮರ್ಥ್ಯದ ಕ್ರೀಡಾಪಟುಗಳಿಗೆ ‘ಯುನಿಫೈಡ್ ಕ್ರಿಕೆಟ್ ಮ್ಯಾಚ್’ ಆಡಲು ಅವಕಾಶ ಕಲ್ಪಿಸಲಾಗಿದೆ.

‘ಎಂಪಿಎಲ್-2016’ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಖಾದರ್ ಶರೀನ್ ನೇತೃತ್ವದ ‘ಟೀಮ್ ಎಲಿಗೆಂಟ್ ಮೂಡಬಿದಿರೆ’ ಇವರು ಶಕ್ತಿನಗರದ ‘ಸಾನಿಧ್ಯ’ ವಸತಿಯುತ ಶಾಲೆ ಹಾಗೂ ಸ್ಪೆಶಲ್ ಒಲಿಂಪಿಕ್ಸ್ ಭಾರತ್-ಕರ್ನಾಟಕ ಇದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳಿಗೆ ‘ಯುನಿಫೈಡ್ ಕ್ರಿಕೆಟ್ ಮ್ಯಾಚ್’ನ ಅವಕಾಶವನ್ನು ಕಲ್ಪಿಸಿದ್ದಾರೆ.

ಯುನಿಫೈಡ್ ಕ್ರಿಕೆಟ್ ಪಂದ್ಯಾಟವು ಮಂಗಳೂರು ಮತ್ತು ಉಡುಪಿ ತಂಡದೊಂದಿಗೆ ನಡೆಯಲಿದ್ದು, ಪ್ರತಿ ತಂಡದಲ್ಲಿ 6ಮಂದಿ ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳು ಇರಲಿದ್ದಾರೆ. 5 ಮಂದಿ ಕ್ರೀಡಾಪಟುಗಳು ಟೀಮ್ ಎಲಿಗೆಂಟ್ ಆಟಗಾರರು ಇರುವರು. ಪಂದ್ಯಾಟವು 6 ಓವರ್‌ಗಳಲ್ಲಿ ನಡೆಯಲಿದೆ. ಈ ತಂಡಗಳೊಂದಿಗೆ ಪರಿಚಯ ಕಾರ್ಯಕ್ರಮವು ಡಿ.16ರಂದು ಮಧ್ಯಾಹ್ನ 2:30ಕ್ಕೆ ಶಕ್ತಿನಗರದಲ್ಲಿರುವ ‘ಸಾನಿಧ್ಯ’ದಲ್ಲಿ ನಡೆಯಲಿದೆ ಎಂದು ಸ್ಪೆಶಲ್ ಒಲಿಂಪಿಕ್ಸ್ ಭಾರತ್-ಕರ್ನಾಟಕ ಇದರ ಏರಿಯಾ ಡೈರೆಕ್ಟರ್ ವಸಂತ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News