×
Ad

ಜಿಷಾ ಕೊಲೆಪ್ರಕರಣದ ಸಿಬಿಐ ತನಿಖೆ ಅಗತ್ಯವಿಲ್ಲ: ಜಿಷಾ ಅಮ್ಮ

Update: 2016-12-14 18:25 IST

ಕೊಚ್ಚಿ,ಡಿಸೆಂಬರ್ 14: ಜಿಷಾ ಕೊಲೆಪ್ರಕರಣದಲ್ಲಿ ಸಿಬಿಐಯಿಂದ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಜಿಷಾ ಅಮ್ಮ ರಾಜೇಶ್ವರಿ ಹೇಳಿದ್ದಾರೆಂದು ವರದಿಯಾಗಿದೆ. 

ಪೊಲೀಸ್ ತನಿಖೆ ತೃಪ್ತಿಕರವಾಗಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಜಿಷಾರ ತಂದೆ ಪಾಪ್ಪು ಸಲ್ಲಿಸಿದ ಅರ್ಜಿ ಹೈಕೋರ್ಟು ಪರಿಗಣಿಸಿದಾಗ ಜಿಷಾ ಅಮ್ಮ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಈಗ ನಡೆದಿರುವ ಪೊಲೀಸ್ ತನಿಖೆ ತೃಪ್ತಿಕರವಾಗಿದೆ. ಆದ್ದರಿಂದ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಜಿಷಾ ಅಮ್ಮ ಪರ ಕೋರ್ಟಿಗೆ ಹಾಜರಾದ ವಕೀಲರು ತಿಳಿಸಿದ್ದಾರೆ. ಇದರೊಂದಿಗೆ ಎಲ್ಲ ಅರ್ಜಿಗಳು ಏಕಕಾಲದಲ್ಲಿ ಪರಿಗಣಿಸಲಿಕ್ಕಾಗಿ ವಿಚಾರಣೆಯನ್ನು ಶನಿವಾರಕ್ಕೆ ಕೋರ್ಟು ಮುಂದೂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News