×
Ad

ನಾಯಿಗಳನ್ನು ಕೊಲ್ಲಬಾರದೆಂದು ಗಟ್ಟಿಯಾಗಿ ನಿಂತ ಶಾಸಕನನ್ನೇ ಕಚ್ಚಿದ ನಾಯಿ !

Update: 2016-12-15 17:24 IST

ಹೊಸದಿಲ್ಲಿ,ಡಿ. 15: ನಾಯಿಗಳನ್ನುಕೊಲ್ಲುವುದನ್ನು ಪ್ರಬಲವಾಗಿ ವಿರೋಧಿಸಿದ್ದ ಶಾಸಕ ಎಲ್‌ದೋಸ್ ಕುನ್ನಪ್ಪಳ್ಳಿ ಇವರನ್ನೇ ದಿಲ್ಲಿಯಲ್ಲಿ ನಾಯಿ ಕಚ್ಚಿರುವ ಘಟನೆ ವರದಿಯಾಗಿದೆ. ದಿಲ್ಲಿ ಕೇರಳ ಹೌಸ್ರನ ಸಮೀಪದಲ್ಲಿ ನಡೆದು ಹೋಗುತ್ತಿದ್ದಾಗ ನಾಯಿಕಚ್ಚಿದೆ.

ಬೆಳಗ್ಗೆ ಅವರು ಕೇರಳ ಹೌಸ್ ಬಳಿ ನಡೆದು ಹೋಗುತ್ತಿದ್ದಾಗ ಶಾಸಕರ ಮೇಲೆ ನಾಯಿಗಳು ಮುಗಿಬಿದ್ದಿದ್ದವು. ಈ ದಾಳಿಯಲ್ಲಿ ಶಾಸಕರ ಎಡಕಾಲಿಗೆ ಗಾಯವಾಗಿದೆ. ಕೇರಳ ಹೌಸ್ ಸಮೀಪವೇ ಕೇಂದ್ರ ಸಚಿವೆ ಮೇನಕಾ ಗಾಂಧಿಯವರು ಮನೆಯನ್ನು ಹೊಂದಿದ್ದಾರೆ. ನಾಯಿಗಳನ್ನು ಕೊಲ್ಲಬಾರದೆಂದು ಶಾಸಕ ಎಲ್‌ದೋಸ್ ಕುನ್ನಪ್ಪಳ್ಳಿ ಗಟ್ಟಿಯಾದ ಧ್ವನಿ ಎತ್ತಿದ್ದರು. ಎರ್ನಾಕುಲಂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾಗ ಪ್ರಾಣಿಪ್ರಿಯರನ್ನು ಕರೆಯಿಸಿಕೊಂಡು ಒಂದು ಕಾರ್ಯಕ್ರಮವನ್ನು ಕೂಡಾ ನಡೆಸಿದ್ದರು.

 ಮೇನಕಾ ಗಾಂಧಿ ರಾತ್ರೆವೇಳೆ ಮನೆಯಿಂದ ಹೊರಗೆ ಇಳಿಯದ್ದರಿಂದ ಅವರು ಹೇಳುತ್ತಿರುವುದು ಆಗಿರಬಹುದು. ಈಗ ಕೇರಳದಲ್ಲಿ ಮಾತ್ರ ಬೀದಿನಾಯಿಗಳು ಕಚ್ಚುತ್ತಿವೆ ಎಂಬ ಅವರ ವಾದ ಸುಳ್ಳಾಗಿದೆ ಎಂದು ಶಾಸಕರು ಈಗ ಹೊಸ ನಿಲುವನ್ನು ಪ್ರಕಟಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News