×
Ad

ಮೊಬೈಲ್ ಗಾಗಿ ಫ್ಲಿಪ್‌ಕಾರ್ಟ್ ವಿತರಕನ ಕೊಲೆ ಮಾಡಿದ ಜಿಮ್ ತರಬೇತುದಾರ !

Update: 2016-12-15 17:57 IST

ಬೆಂಗಳೂರು,ಡಿ. 15: ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ವಿತರಕನನ್ನು ಕೊಲೆಗೈದ ಪ್ರಕರಣದಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವರುಣ್‌ಕುಮಾರ್(22)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ ಒಂಬತ್ತರಂದು ನಂಜುಂಡಸ್ವಾಮಿ(29) ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆನ್‌ಲೈನ್ ನಲ್ಲಿ ಬುಕ್ ಮಾಡಿದ ಮೊಬೈಲ್ ಫೋನನ್ನು ನೀಡಲು ಬಂದ ನಂಜುಂಡರನ್ನು ಆರೋಪಿ ಕತ್ತು ಹಿಸುಕಿ ಕೊಂದುಹಾಕಿದ್ದ ಎನ್ನಲಾಗಿದೆ. ವರುಣ್ ಆನ್‌ಲೈನ್‌ನಲ್ಲಿ ಫೋನ್ ಬುಕ್ ಮಾಡಿದ್ದ. ಆದರೆ ಕೈಯಲ್ಲಿ ಹಣ ಇರಲಿಲ್ಲ. ಆದ್ದರಿಂದ ವಿತರಕನನ್ನೇ ಕೊಲೆಗೈಯಲು ಯೋಜನೆ ಹಾಕಿದ್ದ. 12,000ರೂಪಾಯಿ ಬೆಲೆಯ ಫೋನ್‌ಗೆ ವರುಣ್ ಬುಕ್ ಮಾಡಿದ್ದ. ನಂಜುಂಡ ಸ್ವಾಮಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಬಳಿಕ ಕತ್ತು ಹಿಸುಕಿ ವರುಣ್ ನನ್ನು ಕೊಲೆಮಾಡಿದ್ದಾನೆ. ಬಳಿಕ ನಂಜುಂಡನ ಬ್ಯಾಗ್‌ನಲ್ಲಿ ಇದ್ದ ಮೊಬೈಲ್‌ಫೋನ್‌ಗಳನ್ನು ಕದ್ದಿದ್ದಾನೆ.

ನಂಜುಂಡ ಸ್ವಾಮಿ ಮನೆಯಿಂದ ಹೋಗಿ ಎರಡು ದಿನವಾದರೂ ಮರಳದ್ದರಿಂದ ಮನೆಯವರು ದೂರು ನೀಡಿದ್ದರು. ನಂತರ ಪೊಲೀಸರು ಹುಡುಕಾಟಕ್ಕೆ ಇಳಿದಿದ್ದರು. ಕೊನೆಯ ಡೆಲಿವರಿ ಜಿಮ್ ತರಬೇತು ದಾರನದ್ದಾಗಿತ್ತು ಪೊಲೀಸರು ವಿಚಾರಣೆಗೆ ಜಿಮ್‌ಗೆ ಹೋಗಿ ನೋಡಿದ್ದಾಗ. ಜಿಮ್ ಬಾಗಿಲು ಮುಚ್ಚಿತ್ತು. ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಜಿಮ್‌ನ ಲಿಫ್ಟ್ ಶಾಫ್ಟ್‌ನಲ್ಲಿ ಮೃತದೇಹವು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News