×
Ad

ಬೀಜಿಂಗ್‌ನಲ್ಲಿ ಭಾರೀ ಮಾಲಿನ್ಯ: ಸಮ-ಬೆಸ ಯೋಜನೆ ಜಾರಿ

Update: 2016-12-16 21:21 IST

ಬೀಜಿಂಗ್, ಡಿ. 16: ಭಾರೀ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಶುಕ್ರವಾರ ರಾತ್ರಿಯಿಂದ ವಾಹನಗಳ ನೋಂದಣಿ ಸಂಖ್ಯೆಯ ಆಧಾರದಲ್ಲಿ ‘ಸಮ-ಬೆಸ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಹಾಗೂ ಶಾಲೆಗಳಿಗೆ ರಜೆ ಸಾರಲಾಗಿದೆ.

ಬೀಜಿಂಗ್‌ನ ಆಕಾಶವನ್ನು ಹೊಗೆ ತುಂಬಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.


ಈಗಾಗಲೇ ಬೀಜಿಂಗ್‌ನ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕಟ್ಟೆಚ್ಚರವನ್ನು ಹೊರಡಿಸಲಾಗಿದೆ. ಅದನ್ನು ಶುಕ್ರವಾರ ರಾತ್ರಿಯಿಂದ ಜಾರಿಗೊಳಿಸಲಾಗುವುದು. ಮಾಲಿನ್ಯ ತಿಳಿಯಾದ ಬಳಿಕ ಡಿಸೆಂಬರ್ 21ರಂದು ಕಟ್ಟೆಚ್ಚರವನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News