ನಮಾಝ್ ಗೆ ಬಿಡುವು ನೀಡಿದ ಉತ್ತರಾಖಂಡ ಸರಕಾರ
Update: 2016-12-19 10:21 IST
ಡೆಹ್ರಾಡೂನ್, ಡಿ.19: ಉತ್ತರಾಖಂಡದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ಸರಕಾರಿ ಉದ್ಯೋಗಿಗಳಿಗೆ ಶುಕ್ರವಾರದ ನಮಾಝ್ ಗೆ ಅನುಕೂಲವಾಗುವಂತೆ ವಿಶೇಷ 90 ನಿಮಿಷಗಳ ಬಿಡುವು ನೀಡಲು ಸರಕಾರ ನಿರ್ಧರಿಸಿದೆ. ಸಿಎಂ ಹರೀಶ್ ರಾವತ್ ನೇತೃತ್ವದಲ್ಲಿ ಶನಿವಾರ ನಡೆದ ಸಂಪುಟ ಸಭೆಯಲ್ಲಿ, ಮುಸ್ಲಿಮರಿಗೆ ನಮಾಝ್ ಮಾಡುವುದಕ್ಕಾಗಿ ಪ್ರತೀ ಶುಕ್ರವಾರ ಮಧ್ಯಾಹ್ನ 12.30ರಿಂದ 2.00ಗಂಟೆಯವರೆಗೆ ಕೆಲಸದಿಂದ ಬಿಡುವು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಮೂಲಗಳು ತಿಳಿಸಿವೆ. 90 ನಿಮಿಷದ ಬಿಡುವಿನಲ್ಲಿ ಮುಸ್ಲಿಂ ಉದ್ಯೋಗಿಗಳು ಪ್ರಾರ್ಥನೆ ಮುಗಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಲು ಆದೇಶದಲ್ಲಿ ತಿಳಿಸಲಾಗಿದೆ.