ದೇಶದ ಆರ್ಥಿಕ ವ್ಯವಸ್ಥೆಗೆ ಹಾನಿ: ಜನಾರ್ದನ ಪೂಜಾರಿ

Update: 2016-12-19 18:41 GMT


ಮಂಗಳೂರು,ಡಿ.19: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಕಾರಣ ಆರ್ಥಿಕ ವ್ಯವಸ್ಥೆ ನಾಶವಾಗುತ್ತಿದೆ. ಸೈನಿಕರಿಗೆ ನೀಡಿದ ಭರವಸೆ ಈಡೇರಿಕೆ ಆಗದಿರುವ ಬಗ್ಗೆ ಅವರಿಗೆ ನಿರಾಸೆ ಯಾಗಿದೆ. ಸುಶ್ಮಾ ಸ್ವರಾಜ್‌ರ ಕುಟುಂಬದ ಸದಸ್ಯರು, ಉದ್ಯಮಿ ವಿಜಯ ಮಲ್ಯ, ಲಲಿತ್ ಮೋದಿ ಮೊದಲಾದ ಭ್ರಷ್ಟಾಚಾರಿಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಈ ರೀತಿ ದುರ್ಬಲಗೊಳ್ಳುತ್ತಿದ್ದರೂ ಪ್ರಧಾನಿ ಮೋದಿ ವೌನವಹಿಸಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಜನರನ್ನು ಕಂಗೆಡಿಸಿದೆ ಎಂದು ಎಂದು ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಪುರಂದರ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News