ದಿಲ್ಲಿಯಲ್ಲಿ ಹದಿನೇಳರ ಯುವತಿಯ ಗುಂಡಿಕ್ಕಿ ಕೊಲೆ
Update: 2016-12-21 10:19 IST
ಹೊಸದಿಲ್ಲಿ, ಡಿ.21: ಹದಿನೇಳರ ಯುವತಿಯನ್ನು ಆಕೆಯ ಸ್ನೇಹಿತ ಗುಂಡಿಕ್ಕಿ ಕೊಲೆಗೈದ ಘಟನೆ ಇಂದು ಬೆಳಗ್ಗೆ ಪಶ್ಚಿಮ ದಿಲ್ಲಿಯ ನಜಾಫ್ ಗಡದಲ್ಲಿ ನಡೆದಿದೆ.
ಯುವತಿಯನ್ನು ಆಕೆಯ ಮನೆಯ ಮುಂದೆಯೇ ಕೊಲ್ಲಲಾಗಿದ್ದು, ರಾಜೋರಿ ಗಾರ್ಡನ್ ನಲ್ಲಿ ಯುವತಿ ಇಬ್ಬರು ಸ್ಹೇಹಿತರೊಂದಿಗೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ಬೆಳಗ್ಗೆ 7:30ರ ಹೊತ್ತಿಗೆ ಮನೆಗೆ ವಾಪಸಾಗುತ್ತಿದ್ದಾಗ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ ಯುವಕ ಗನ್ ನ್ನು ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾನೆ. ಯುವತಿಯ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.