×
Ad

ತಮಿಳುನಾಡು ಮುಖ್ಯ ಕಾರ್ಯದರ್ಶಿ ಮನೆಗೆ ಐಟಿ ದಾಳಿ

Update: 2016-12-21 12:39 IST

ಚೆನ್ನೈ, ಡಿ.21:  ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್ ಅವರ ಅಣ್ಣಾ ನಗರ ನಿವಾಸದ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯವನ್ನು ನಡೆಸಿದ್ದಾರೆ.
ತಮಿಳುನಾಡಿನ ರಾಜಕೀಯ ನಾಯಕರಿಗೆ ಆಘಾತ ನೀಡಿದ ಐಟಿ ಅಧಿಕಾರಿಗಳು ಇದೀಗ ಸರಕಾರದ ಉನ್ನತ ಅಧಿಕಾರಿಗಳ ಮನೆಗಳಿಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ನಗ-ನಗದನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.
ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್ ಅವರ ಮನೆ, ಮಗನ ಮನೆ ಮತ್ತು ಸಂಬಂಧಿಕರ ಮನೆಗಳಿಗೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತೆರಿಗೆ ಇಲಾಖೆಯ  20 ಅಧಿಕಾರಿಗಳ ತಂಡ ದಾಳಿ ನಡೆಸಿ ಪಿ.ರಾಮ ಮೋಹನ್ ರಾವ್  ಮನೆಯಲ್ಲಿ ಶೋಧ ಕೈಗೊಂಡಿದ್ದಾರೆ
ಪ್ರಭಾವಿ ಮರಳು ಗಣಿಗಾರಿಕೆ ಉದ್ಯಮಿ ಶೇಖರ್ ರೆಡ್ಡಿ ಅವರಿಂದ ಇತ್ತೀಚೆಗೆ 130 ಕೋಟಿ ರೂಪಾಯಿ ಅಘೋಷಿತ ಹಣ ಮತ್ತು 2,000 ರೂಪಾಯಿಗಳ ಹೊಸ ನೋಟು, 171 ಕೆಜಿ ಚಿನ್ನ ಇತ್ತೀಚೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಐಟಿ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿತ್ತು. 

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ  ಶೇಖರ್ ರೆಡ್ಡಿ  ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಕೇಸು ದಾಖಲಿಸಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News