×
Ad

ಈ ವಂಚಕಿಗೆ ವಿವಾಹವಾಗುವುದೇ ಧಂದೆ !

Update: 2016-12-21 13:25 IST

ಕೊಚ್ಚಿ,ಡಿ.21: ಇತ್ತೀಚೆಗೆ ನೋಯ್ಡದಲ್ಲಿ ಬಂಧಿಸಲಾಗಿದ್ದ,ಅಂಗವಿಕಲರು, ಶ್ರೀಮಂತರನ್ನು ಮದುವೆಯಾಗಿ ಹಣ,ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಹಾಗೂ ಆಕೆಯ ತಂಡವನ್ನು ಕೇರಳದ ಕೊಚ್ಚಿಗೆ ಕರೆತರಲಾಗಿದೆ.

ಇಂದೋರಿನ ಮೇಘಾ ಭಾರ್ಗವಿ(27), ಸಹೋದರಿ ಪ್ರಾಚಿ(29) ಹಾಗೂ ಮೇಘಾಳ ಇನ್ನೋರ್ವ ಸಹೋದರಿಯ ಪತಿ ದೇವೇಶ್ ಶರ್ಮ(32)ರನ್ನು ಕೊಚ್ಚಿ ಕಡವತ್ರ ಪೊಲೀಸರು ಕರೆತಂದಿದ್ದು, ಕೋರ್ಟಿಗೆ ಹಾಜರು ಪಡಿಸಿದ್ದಾರೆ.

ಮದುವೆಗೆ ಮಧ್ಯವರ್ತಿಯಾಗುತ್ತಿದ್ದ ಮಹೇಂದ್ರ ಗುಂಡೇಲ ಎಂಬಾತ ತಪ್ಪಿಸಿಕೊಂಡಿದ್ದಾನೆ. ಕೇರಳದ ಪೊನ್ನೂರಿನಲ್ಲಿ ವಾಸವಿರುವ ಗುಜರಾತ್ ಮೂಲದ ಲೆನಿನ್ ಜೀತೆಂದರ್(32) ಎಂಬವರನ್ನು ತಂಡ ವಂಚಿಸಿದ್ದು, ಆ ಬಳಿಕ ಅವರು ಕಡವತ್ರ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಂಡವನ್ನು ನೋಯ್ಡದಲ್ಲಿ ಬಂಧಿಸಲಾಗಿತ್ತು.

ಮದುವೆಜಾಹೀರಾತು ನೀಡುವ ಮೂಲಕ ಪರಿಚಯಿಸಿಕೊಂಡು ತನ್ನ ಮನೆಯವರ ಮುಖಾಂತರ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದರು. ಮೇಘಾ ಭಾರ್ಗವಿ ವಧುವಿನ ನಾಟಕ ಆಡುತ್ತಿದ್ದಳು. ವಂಚನೆಗೆ ಗುರಿಪಡಿಸುವ ಕುಟುಂಬದವರಲ್ಲಿ ಹುಡುಗಿಯ ಮನೆಯವರು ಬಡವರು ಎಂದು ಹೇಳಿ ಸಹಾಯ ಕೇಳುತ್ತಿದ್ದರು. ಮೇಘಾಳಿಂದ ವಂಚನೆಗೊಳಗಾದ ಲೆನಿನ್‌ರಿಂದ 9ಲಕ್ಷರೂಪಾಯಿ ಹಾಗೂ 25 ಲಕ್ಷ ರೂಪಾಯಿ ನಗದು ಹಣವನ್ನು ಪೀಕಿಸಿ ಮದುವೆಯಾಗಿದ್ದಳು ಎಂದು ವರದಿಯಾಗಿದೆ. 17ದಿವಸ ಲೆನಿನ್ ಜೊತೆ ವಾಸಿಸಿದ ಮೇಘಾ ಊರಿಗೆ ಹೋಗುತ್ತೇನೆಂದು ಸಹೋದರಿ ಪ್ರಾಚಿಯ ಜೊತೆ ಹೋದವಳು ನಾಪತ್ತೆಯಾಗಿದ್ದಳು. ಇದೇ ವೇಳೆ ಆಕೆ ತನ್ನ ಜೊತೆ ಹಣ ಮತ್ತು ಆಭರಣಗಳನ್ನು ಒಯ್ದಿದ್ದಳು. ನಂತರ ತಂಡ ನೀಡಿದ್ದ ವಿಳಾಸಕ್ಕೆ ಲೆನಿನ್ ತಂದೆ ಹೋಗಿ ಕರೆದಾಗ ಬರಲು ಪ್ರಾಚಿ ನಿರಾಕರಿಸಿದ್ದು, ಆಮೇಲೆ ಮೇಘಾಳ ಕುಟುಂಬ ತಮ್ಮ ವಾಸಸ್ಥಳವನ್ನು ಬದಲಿಸಿರುವುದು ತಿಳಿದು ಬಂದಿತ್ತು. ನಂತರ ಲೆನಿನ್ ಕಡವತ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಹುವಿವಾಹ ವಂಚಕ ತಂಡ ದಿಲ್ಲಿ,ಪುಣೆ, ಉತ್ತರಪ್ರದೇಶದ ವಿವಿಧ ನಗರಗಳಲ್ಲಿ ಆಗಾಗ ವಾಸ ಬದಲಾಯಿಸಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಮದುವೆಯಾದರೂ ದೇಹ ಸಂಬಂಧವನ್ನು ಉಪಾಯವಾಗಿ ಮುಂದೂಡುತ್ತಿದ್ದ ಮೇಘಾ ನಂತರ ಸಮಯಸಾಧಿಸಿ ಹಣ ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದಳು ಎನ್ನಲಾಗಿದೆ.

  ಜೈನ ಸಂಪ್ರದಾಯದ ಮೇಘಾ ಅದೇ ಸಂಪ್ರದಾಯದವರನ್ನು ವಂಚನೆಗೆ ಬಳಸಿಕೊಳ್ಳುತ್ತಿದ್ದು, ಈವರೆಗೆ ಐದುರಾಜ್ಯಗಳಲ್ಲಿ ಐದು ಮಂದಿಯನ್ನು ಮದುವೆಆಗಿ ವಂಚಿಸಿದ ವಿವರ ಪೊಲೀಸರಿಗೆ ಲಭಿಸಿದೆ. ಎರ್ನಾಕುಲಂ ಜುಡಿಶಿಯಲ್ ಫಸ್ಟ್‌ಕ್ಲಾಸ್ ಕೋರ್ಟಿಗೆ ಆರೋಪಿಗಳನ್ನು ಹಾಜರು ಪಡಿಸಲಾಗಿದ್ದು ಕೋರ್ಟು ರಿಮಾಂಡ್ ವಿಧಿಸಿದೆ ಎಂದುವರದಿ ತಿಳಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News