ನೌಕರರಿಗೆ ನಗದುರಹಿತ ವೇತನ

Update: 2016-12-21 09:01 GMT

 ಹೊಸದಿಲ್ಲಿ,21: ಕೇಂದ್ರ ಸರಕಾರ ಇದೀಗ ದೇಶದ ನೌಕರರ ವೇತನವನ್ನು ನಗದು ರಹಿತವಾಗಿ ಮಾಡಲು ನಿರ್ಧರಿಸಿದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟದ ಸಭೆಯು  ಈ ನಿರ್ಧಾರ ಕೈಗೊಂಡಿದ್ದು, ನಗದು ರಹಿತ ವೇತನ ಪಾವತಿ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ  ಸರಕಾರ ನಿರ್ಧರಿಸಿದೆ.  ಚೆಕ್, ಇ-ಪೇಮೆಂಟ್ ಮೂಲಕ ನೌಕರರಿಗೆ ವೇತನ ಪಾವತಿ ಮಾಡುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ  ಈ ನಿರ್ಧಾರವನ್ನು  ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆಸರಕಾರದ  ಈ ಆದೇಶ ಜಾರಿಯಾದರೆ  ನಗದು ರೂಪದಲ್ಲಿ ವೇತನ ಪಡೆಯುತ್ತಿದ್ದ ಅಸಂಖ್ಯಾತ ಆಸಂಘಟಿತ ಕಾರ್ಮಿಕ ವಲಯದ ಮೇಲೆ  ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News