ಕೇರಳ ಪೊಲೀಸರಿಗೆ ಬುದ್ಧಿ ಹೇಳಬೇಕು: ಪ್ರಕಾಶ್ ಕಾರಟ್
Update: 2016-12-21 15:57 IST
ಕಣ್ಣೂರ್, ಡಿ. 21: ಸಿಕ್ಕಸಿಕ್ಕದ್ದಕ್ಕೆಲ್ಲ ದೇಶದ್ರೋಹ ಆರೋಪ ಹೊರಿಸುವ ಕೇರಳ ಪೊಲೀಸರಲ್ಲಿ ಸರಿಯಾದ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಿಪಿಎಂ ಕೇಂದ್ರ ಪೊಲಿಟ್ ಬ್ಯೂರೊ ಸದಸ್ಯ ಪ್ರಕಾಶ ಕಾರಟ್ ಹೇಳಿದ್ದಾರೆ.
ಏಕ ನಾಗರಿಕ ನೀತಿ ಸಂಹಿತೆ: ಎಡಪಕ್ಷಗಳು" ಎನ್ನುವ ವಿಷಯದಲ್ಲಿ ಅಲ್ಪಸಂಖ್ಯಾತರ ಸಾಂಸ್ಕೃತಿಕ ಸಮಿತಿ ಇದರ ಕಣ್ಣೂರ್ ಜಿಲ್ಲಾ ಸಮಿತಿ ಆಯೋಜಿಸಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಕ್ಯಾಲಿಕಟ್‌ನ ಸಾಹಿತಿ ಒಬ್ಬರನ್ನು ಪೊಲೀಸರು ದೇಶದ್ರೋಹ ಆರೋಪದಡಿಯಲ್ಲಿ ಬಂಧಿಸಿದ್ದು ಸರಿಯಲ್ಲ. ಪೊಲೀಸರು ಇಂತಹ ಬಲಪ್ರಯೋಗ ಮಾಡದಂತೆ ಕೇರಳದ ಎಲ್‌ಡಿಎಫ್ ಸರಕಾರ ಎಚ್ಚರಿಕೆ ವಹಿಸಬೇಕೆಂದು ಅವರು ಸಲಹೆ ನೀಡಿದ್ದಾರೆಂದು ವರದಿಯೊಂದು ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.