ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುಟ್ಟರೆ ಭಾರೀ ದಂಡ !
ಹೊಸದಿಲ್ಲಿ,ಡಿ.23: ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿಹಾಕಿ ಸುಡುವುದನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಡಳಿ ನಿಷೇಧಿಸಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು ಸುಡುವಂತಿಲ್ಲ. ಒಂದುವೇಳೆ ಸುಟ್ಟರೆ ಗರಿಷ್ಠ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಹಸಿರು ನ್ಯಾಯಧಿಕರಣ ಅಧ್ಯಕ್ಷ ಜಸ್ಟಿಸ್ ಸ್ವತಂತರ್ ಕುಮಾರ್ ಅಧ್ಯಕ್ಷತೆಯ ಪೀಠ ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು ಸುಡುವುದನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಸಸುಟ್ಟರೆ 5,000ರೂಪಾಯಿಯಿಂದ 25,000ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ತೀರ್ಪು ನೀಡಿದೆ.
ಕಸ ನಿರ್ವಹಣೆಗೆ ಸಂಬಂಧಿಸಿದ 2016ರ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಸಿರು ನ್ಯಾಯಧಿಕರಣ ನಿರ್ಧರಿಸಿದೆ. 2016ರಲ್ಲಿ ಹಸಿರು ನ್ಯಾಯಮಂಡಳಿಗೆ ಆದೇಶ ಜಾರಿಗೆ ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ನಾಲ್ಕುವಾರಗಳೊಳಗೆ ಕಸ ನಿರ್ವಹಣೆಗೆ ಸಂಬಂಧಿಸಿದ ಯೋಜನೆ ಸಲ್ಲಿಸಲು ಸಂಬಂಧಿಸಿದ ರಾಜ್ಯಗಳಿಗೆ ಆದೇಶಿಸಿದೆ ಎಂದು ವರದಿಯಾಗಿದೆ.