×
Ad

ಕೆಲಸದ ಅವಧಿ ಮುಗಿದ ಕಾರಣ ಹಣ ನೀಡಲು ನಿರಾಕರಣೆ : ಬ್ಯಾಂಕ್‌ನೊಳಗೆ ಸಿಬ್ಬಂದಿಯನ್ನು ಕೂಡಿ ಹಾಕಿದ ಗ್ರಾಹಕರು

Update: 2016-12-23 18:46 IST

ಮುಝಾಫರ್ ನಗರ, ಡಿ.23: ಕೆಲಸದ ಅವಧಿ ಮುಗಿದ ಕಾರಣ ಹಣ ನೀಡಲಾಗುವುದಿಲ್ಲ ಎಂದು ತಿಳಿಸಿದ ಬ್ಯಾಂಕ್‌ನ ಸಿಬ್ಬಂದಿಗಳನ್ನು ಗ್ರಾಹಕರು ಬ್ಯಾಂಕ್‌ನೊಳಗೆ ಕೂಡಿಹಾಕಿ ಬೀಗ ಜಡಿದ ಘಟನೆ ವರದಿಯಾಗಿದೆ.

 ಸ್ಟೇಟ್ ಬ್ಯಾಂಕ್‌ನ ಶಾಖೆಯೊಂದರಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್‌ನ ಕೆಲಸದ ಅವಧಿ ಮುಗಿದ ಕಾರಣ ಈ ದಿನ ಹಣ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ಗ್ರಾಹಕರು ಆಕ್ರೋಶಗೊಂಡು, ಅಧಿಕಾರಿಗಳನ್ನು ಬ್ಯಾಂಕ್‌ನೊಳಗೆ ಕೂಡಿಹಾಕಿ ಬೀಗ ಜಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ತೆರವುಗೊಳಿಸಿ ಅಧಿಕಾರಿಗಳು ಹೊರ ಬರಲು ಅವಕಾಶ ಮಾಡಿಕೊಟ್ಟರು ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News