×
Ad

ಸೆನ್ಸೆಕ್ಸ್ ಅಂಕ ಭಾರೀ ಇಳಿಕೆ

Update: 2016-12-23 18:52 IST

ಮುಂಬೈ, ಡಿ.23: ವಿದೇಶಿ ನಿಧಿಯ ಸಹನೀಯ ಹೊಸ ಹರಿವು ಹಾಗೂ ಏಶ್ಯದ ದುರ್ಬಲ ಆರಂಭಿಕ ಸೂಚನೆಗಳ ನಡುವೆ, ಹೂಡಿಕೆದಾರರು ಬೆಟ್‌ಗಳನ್ನು ಕಡಿತಗೊಳಿಸಲು ತೊಡಗಿರುವುದರಿಂದ, ಇಂದು ಆರಂಭಿಕ ವ್ಯಾಪಾರದ ವೇಳೆ ಬೆಂಚ್ ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ ಇನ್ನೂ 64 ಅಂಕಗಳಷ್ಟು ಕುಸಿದು, 25,915.41ಕ್ಕೆ ತಲುಪಿದೆ.

30 ಶೇರಿನ ಬಾರೋ ಮೀಟರ್ 64.19 ಅಂಕ ಅಥವಾ ಶೇ.0.25ರಷ್ಟು ಕಡಿಮೆಯಾಗಿ 25,915.41ಕ್ಕೆ ಮುಟ್ಟಿದೆ. ಲೋಹಗಳು, ಎಫ್‌ಎಂಸಿಜಿ, ಆಟೊ, ಮೂಲ ಸೌಕರ್ಯ ಪ್ರಧಾನ ಸರಕುಗಳು ಹಾಗೂ ಬ್ಯಾಂಕಿಂಗ್ ವ್ಯವಹಾರ ಕಡಿಮೆಯಾಗಿರುವ ಸೂಚನೆ ನೀಡಿವೆ.

ಹಿಂದಿನ ಏಳು ಅವಧಿಗಳಲ್ಲಿ ಸೂಚ್ಯಂಕ 718.22 ಅಂಕಗಳಷ್ಟು ಇಳಿದಿದೆ.

ಎನ್‌ಎಸ್‌ಇ ನಿಫ್ಟಿ, 23.60 ಅಂಕ ಅಥವಾ ಶೇ.0.29ರಷ್ಟು ಕುಸಿದು 7,955.50ರಲ್ಲಿ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News