×
Ad

ಬ್ಯಾಂಕ್‌ನಲ್ಲಿ ಹಣದ ಅವ್ಯವಹಾರ: ಮಾಜಿ ಪ್ರಬಂಧಕ ಸಹಿತ 24 ಜನರ ವಿರುದ್ಧ ಮೊಕದ್ದಮೆ

Update: 2016-12-23 19:32 IST

ಥಾಣೆ, ಡಿ.23: ರೂ. 3.14 ಕೋಟಿಯಷ್ಟು ಬ್ಯಾಂಕ್‌ನ ಹಣ ಅವ್ಯವಹಾರದ ಆರೋಪದಲ್ಲಿ ಬ್ಯಾಂಕೊಂದರ ಮಾಜಿ ಪ್ರಬಂಧಕ ಹಾಗೂ ಥಾಣೆ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರ ಸಹಿತ ಸುಮಾರು 24 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕೊಂದರ ಮಾಜಿ ಪ್ರಬಂಧಕನೊಬ್ಬ ಇತರರೊಂದಿಗೆ ಸೇರಿ ಕಲ್ಯಾಣ್-ಡೊಂಬಿವಿಲಿ ಮಹಾನಗರ ಪಾಲಿಕೆಯ ಅನುಮತಿಯಿಲ್ಲದೆ, ಅದರ ನೌಕರರ ಭವಿಷ್ಯ ನಿಧಿ ಖಾತೆಗಳಿಂದ ರೂ. 2.82 ಕೋಟಿಯಷ್ಟು ನಿರಖು ಠೇವಣಿಗಳನ್ನು ಲಪಟಾಯಿಸಿ, ಆ ಮೊತ್ತ ಹಾಗೂ ಪಾಲಿಕೆಯ ಇನ್ನೂ ರೂ. 72 ಲಕ್ಷಗಳನ್ನು ಇನ್ನೊಂದು ಖಾತೆಗೆ ವರ್ಗಾಯಿಸಿದ್ದರು. ಕೆಲವು ವ್ಯಾಪಾರಿಗಳು ಹಾಗೂ ಬಿಲ್ಡರ್‌ಗಳಿಗೆ ಅನೂಕೂಲ ಕಲ್ಪಿಸಲು ಬ್ಯಾಂಕ್ ನಿಯಮಾವಳಿ ಉಲ್ಲಂಘಿಸಿ ಅವರು ಈ ರೀತಿ ಮಾಡಿದ್ದಾರೆಂದು ಆರೋಪಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ಫಲಾನುಭವಿಗಳ ಶಾಮೀಲಾತಿಯೊಂದಿಗೆ ಸೆ.2015 ಹಾಗೂ ಜೂ.2016ರ ನಡುವೆ ಈ ವಂಚನೆ ನಡೆದಿದೆ.

ಬ್ಯಾಂಕ್‌ನ ಅಧಿಕಾರಿಯೊಬ್ಬರ ದೂರಿನ ಮೇಲೆ, ಖಡಕ್‌ಪಾಡ ಪೊಲೀಸರು ನಿನ್ನೆ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News