×
Ad

ಆಸ್ಟ್ರೇಲಿಯ-ಪಾಕ್ ಎರಡನೆ ಟೆಸ್ಟ್‌ಗೆ ಬಿಗಿ ಭದ್ರತೆ

Update: 2016-12-23 23:49 IST

 ಮೆಲ್ಬೋರ್ನ್, ಡಿ.23: ದೇಶದಲ್ಲಿ ಭಯೋತ್ಪಾದನೆಯ ಶಂಕೆಯ ಮೇರೆಗೆ ಏಳು ಮಂದಿಯನ್ನು ಬಂಧಿಸಿರುವ ಕಾರಣ ಸೋಮವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ)ನಲ್ಲಿ ಆರಂಭವಾಗಲಿರುವ ಆತಿಥೇಯ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬಂಧಿಸಲ್ಪಟ್ಟ ಉಗ್ರರು ಕ್ರಿಸ್‌ಮಸ್ ದಿನದಂದು ಮೆಲ್ಬೋರ್ನ್ಸ್ ಫ್ಲಿಂಡರ್ಸ್‌ ಸ್ಟ್ರೀಟ್ ಟ್ರೈನ್ ಸ್ಟೇಶನ್, ಫೆಡರೇಶನ್ ಸ್ಕ್ವಾರ್ ಹಾಗೂ ಸೈಂಟ್ ಪಾಲ್ ಕ್ಯಾಥಡ್ರಲ್‌ನಲ್ಲಿ ಬಾಂಬು ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದರು.

ಮುಂದಿನ ಏಳು ದಿನಗಳ ಕಾಲ ನಮ್ಮ ರಾಜ್ಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್, ಕ್ರಿಸ್‌ಮಸ್ ದಿನಾಚರಣೆ ಸಹಿತ ಹಲವಾರು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಉಗ್ರರ ದಾಳಿ ಭೀತಿ ಇರುವ ಬಗ್ಗೆ ಗುಪ್ತಚರ ಇಲಾಖೆ ನಮಗೆ ಮಾಹಿತಿ ನೀಡಿಲ್ಲ. ಆದಾಗ್ಯೂ ನಾವು ಮುನ್ನೆಚ್ಚರಿಕ ಕ್ರಮವಾಗಿ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದೇವೆ ಎಂದು ಮುಖ್ಯ ಪೊಲೀಸ್ ಆಯುಕ್ತ ಗ್ರಹಾಂ ಆಶ್ಟನ್ ಹೇಳಿದ್ದಾರೆ.

ಆಸ್ಟ್ರೇಲಿಯ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 39 ರನ್‌ಗಳ ಅಂತರದಿಂದ ಗೆದ್ದುಕೊಂಡು 1-0 ಮುನ್ನಡೆ ಸಾಧಿಸಿದೆ. ಜ.3 ರಿಂದ ಸಿಡ್ನಿಯಲ್ಲಿ ಮೂರನೆ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News