×
Ad

4ವರ್ಷದ ಮಗುವಿನ ತುಂಡರಿಸಿದ ದೇಹಭಾಗ ಪತ್ತೆ: ಅತ್ಯಾಚಾರ ಶಂಕೆ

Update: 2016-12-24 19:46 IST

ರಾಂಚಿ,ಡಿ.24: ದೇಹಭಾಗಗಳನ್ನು ತುಂಡರಿಸಲಾದ ಸ್ಥಿತಿಯಲ್ಲಿದ್ದ 4 ವರ್ಷ ವಯಸ್ಸಿನ ಪುಟ್ಟ ಹೆಣ್ಣು ಮಗುವಿನ ಮೃತದೇಹ ಝಾರ್ಕಂಡ್‌ನ ಸಿಂಗ್ಬ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮಗುವಿನ ಕಣ್ಣುಗಳನ್ನು ಕಿತ್ತುಹಾಕಿ, ಎರಡೂ ಕೈಗಳನ್ನು ದೇಹದಿಂದ ಬೇರ್ಪಡಿಸಲಾಗಿದೆ. ಡಿಸೆಂಬರ್ 15ರಂದು ಹೆಣ್ಣು ಮಗು ಮನೆಯಿಂದ ಕಾಣೆಯಾಗಿತ್ತು. ಅತ್ಯಾಚಾರ ನಡೆಸಲಾದ ಕುರುಹುಗಳು ಮೃತದೇಹದಲ್ಲಿದೆ ಎಂದು ತಿಳಿದು ಬಂದಿದೆ.

ಝಾರ್ಕಂಡ್ ಸಿಂಗ್ಬ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಒಂದು ವಾರದ ಹಿಂದೆ ರಾಂಚಿ ಸರ್ದಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 19ವರ್ಷದ ಯುವತಿಯ ಅತ್ಯಾಚಾರ ನಡೆಸಿ ಬೆಂಕಿಹಚ್ಚಿದ ಘಟನೆ ನಡೆದಿತ್ತು.

ಮಂತ್ರವಾದ ಮಗುವಿನ ಕೊಲೆಕೃತ್ಯಕ್ಕೆ ಕಾರಣ ಎಂದು ಕೆಲವು ಗ್ರಾಮಸ್ಥರುಆರೋಪಿಸಿದ್ದು, ಘಟನೆಯಲ್ಲಿ ಅವಯವ ಮಾಫಿಯಾಕ್ಕೇನಾದರೂ ಸಂಬಂಧವಿದೆಯೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗು ಕಾಣೆಯಾಗಿರುವ ದೂರು ಹೆತ್ತವರು ನೀಡಿದ್ದರೂ ಪೊಲೀಸರು ಪ್ರಕರಣ ಗಂಭೀರವಾಗಿ ತನಿಖೆ ನಡೆಸಿಲ್ಲ ಎಂದು ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆಬಂದ ಎಸ್ಸೈಗೆ ಮುತ್ತಿಗೆ ಹಾಕಿ ಊರವರು ಪ್ರತಿಭಟಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News