×
Ad

54 ಸಾವಿರ ಜನರು ಕ್ರಿಸ್‌ಮಸ್‌ನಂದು ಮನೆಯಿಂದ ಹೊರ ಹೋಗುವಂತಿಲ್ಲ

Update: 2016-12-25 09:19 IST

ಜರ್ಮನಿ, ಡಿ.25: ದಕ್ಷಿಣ ಜರ್ಮನಿಯ ಅಗ್ಸ್‌ಬರ್ಗ್ ನಗರದ ಸುಮಾರು 54 ಸಾವಿರ ಮಂದಿ ಕ್ರಿಸ್‌ಮಸ್ ದಿನದಂದು ಬೆಳಗ್ಗೆ ಮನೆಗಳಿಂದ ಹೊರಹೋಗಬೇಕಾಗಿದೆ. ಅಧಿಕಾರಿಗಳು ಎರಡನೆ ಮಹಾಯುದ್ಧ ಅವಧಿಯ 1.8 ಟನ್ ವೈಮಾನಿಕ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿರುವುದು ಇದಕ್ಕೆ ಕಾರಣ.

ನಗರದ ಮೆಡಿವಲ್ ಕ್ಯಾಥಡ್ರೆಲ್ ಹಾಗೂ ಸಿಟಿ ಹಾಲ್‌ಗಳನ್ನು ಮುಚ್ಚಲಾಗಿದೆ. ಈ ಬೀದಿಗಳ ಆಸುಪಾಸಿನಲ್ಲಿ ಯಾರನ್ನೂ ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಭಾನುವಾರ ಮುಂಜಾನೆ 8ರಿಂದ ಈ ಆದೇಶ ಜಾರಿಗೆ ಬರಲಿದ್ದು, 10 ಗಂಟೆಯ ಒಳಗೆ ಎಲ್ಲರೂ ಮನೆಗಳನ್ನು ಬಿಡುವಂತೆ ಸೂಚಿಸಲಾಗಿದೆ.

ಈ ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಎಷ್ಟು ಅವಧಿವರೆಗೆ ನಡೆಯಬಹುದು ಎಂದು ಖಚಿತವಾಗಿ ಹೇಳುವಂತಿಲ್ಲ. ಶಾಲೆಗಳನ್ನು ತೆರೆಯಲಾಗುವುದು. ಆದರೆ ಅವರು ಸಂಬಂಧಿಕರು, ಸ್ನೇಹಿತರ ಜತೆ ವಾಸ್ತವ್ಯ ಇರುವಂತಿಲ್ಲ. ಜನ ತಮ್ಮ ಸಾಕು ಪ್ರಾಣಿಗಳನ್ನು ತರಬಹುದು. ಕ್ರಿಸ್‌ಮಸ್‌ನ ಮುಂಜಾನೆ ಸಾರ್ವಜನಿಕ ಸಾರಿಗೆ ಉಚಿತವಾಗಿರುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

ಎರಡನೆ ಮಹಾಯುದ್ಧದ ಸಂದರ್ಭದ ಬಾಂಬ್‌ಗಳು ಪತ್ತೆಯಾಗುವುದು ಜರ್ಮನಿಯಲ್ಲಿ ಹೊಸದಲ್ಲ. ಆದರೆ ಈ ಬಾರಿ ಪತ್ತೆಯಾಗಿರುವುದು ಹಿಂದೆಂದಿಗಿಂತಲೂ ಬೃಹತ್ ಪ್ರಮಾಣದ್ದಾಗಿದ್ದು, ಹಿಂದೆ ಕೆಬ್ಲೆನ್ಸ್‌ನಲ್ಲಿ ಬಾಂಬ್ ಪತ್ತೆಯಾದಾಗ 45 ಸಾವಿರ ಮಂದಿಯನ್ನು ಒಕ್ಕಲೆಬ್ಬಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News