×
Ad

ಚೆಕ್ ಬೌನ್ಸ್ ಪ್ರಕರಣಕ್ಕೆ ಕಠಿಣ ಶಿಕ್ಷೆ: ಕೇಂದ್ರ ಸರಕಾರ ಚಿಂತನೆ

Update: 2016-12-25 10:49 IST

ಹೊಸದಿಲ್ಲಿ, ಡಿ.25: ಗರಿಷ್ಠ ಮೊತ್ತದ ನೋಟುಗಳ ರದ್ದತಿ ಹಾಗೂ ನಗದುರಹಿತ ವ್ಯವಹಾರದತ್ತ ಹೊರಳುತ್ತಿರುವ ಈ ಹೊತ್ತಿನಲ್ಲಿ ಕೇಂದ್ರ ಸರಕಾರ ‘ಚೆಕ್ ಬೌನ್’್ಸ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಶಿಕ್ಷೆ ಜಾರಿಗೆ ತರುವ ಸಂಬಂಧ ಕಾನೂನಿನಲ್ಲಿ ಬದಲಾವಣೆ ತರಲು ಚಿಂತಿಸುತ್ತಿದೆ ಎನ್ನಲಾಗಿದೆ.

ಬಜೆಟ್ ಪೂರ್ವ ತಯಾರಿಯ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯದ ಉನ್ನತಾಧಿಕಾರಿಗಳು ವ್ಯಾಪಾರಿಗಳ ಸಂಘಟನೆಯ ನಿಯೋಗವನ್ನು ಭೇಟಿಯಾಗಿದೆ. ಈ ವೇಳೆ, ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ನೀಡಿದಾತನಿಗೆ ತಿಂಗಳೊಳಗೆ ಜೈಲು ಶಿಕ್ಷೆ ನೀಡುವ ಕಠಿಣ ಕಾನೂನು ತರಬೇಕೆಂದು ಸಲಹೆ ನೀಡಲಾಗಿದೆೆ. 500 ಹಾಗೂ 1000 ರೂ.ಮುಖಬೆಲೆ ನೋಟುಗಳ ಅಮಾನ್ಯದ ಬಳಿಕ ದೇಶದ ವಹಿವಾಟುಗಳಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರಕಾರ ಇಂತಹದ್ದೊಂದು ಕಠಿಣ ಹೆಜ್ಜೆ ಇಡಬೇಕೆಂದು ಟ್ರೇಡರ್ಸ್‌ ಅಸೋಸಿಯೇಶನ್ ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ.

ಚೆಕ್ ಬೌನ್ಸ್ ಭೀತಿಯ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಗ್ರಾಹಕರಿಂದ ಚೆಕ್‌ಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಚೆಕ್‌ಗಳನ್ನು ನೀಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವ್ಯಾಪಾರಿಗಳ ಸಂಘಟನೆ ಕೇಂದ್ರ ಆರ್ಥಿಕ ಸಚಿವಾಲಯದ ಕ್ಕೆ ವಿನಂತಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನ.8ರಂದು ನೋಟು ಅಮಾನ್ಯ ಗೊಳಿಸಿದ ಬಳಿಕ ದೇಶಾದ್ಯಂತ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದಾರೆ.

 ನೋಟು ನಿಷೇಧವಾಗಿ 50 ದಿನಗಳ ಆಗುತ್ತಿದ್ದರೂ ನಗದು ಬಿಕ್ಕಟ್ಟು ಮುಂದುವರಿದಿದೆ. ವ್ಯಾಪಾರಿಗಳು ಹೆಚ್ಚುವರಿ ಖಾತ್ರಿಯ ಮೇಲೆ ಹೆಚ್ಚು ಬ್ಯಾಂಕ್ ಚೆಕ್‌ಗಳನ್ನು ಬಳಸುತ್ತಿದ್ದಾರೆ. ಕೇಂದ್ರ ಸರಕಾರ ಈ ನಿರ್ದಿಷ್ಟ ಸಲಹೆಗೆ ಒಪ್ಪಿಗೆ ಸೂಚಿಸಿದೆಯೇ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕೇಂದ್ರ ಸರಕಾರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ. ಸಂಸತ್‌ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಕಾಯ್ದೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News