ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣದಿಂದ ಇಬ್ಬರ ಖುಲಾಸೆ

Update: 2016-12-25 13:40 GMT

ಹೊಸದಿಲ್ಲಿ, ಡಿ.25: ದೇಶದ ವಿರುದ್ಧ ಯುದ್ಧ ಸಾರಿದ್ದ ಆರೋಪದಿಂದ ಇಬ್ಬರು ವ್ಯಕ್ತಿಗಳನ್ನು ನಗರದ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ. 10 ವರ್ಷಗಳ ಹಿಂದೆ ದಾಖಲಾಗಿದ್ದ ಈ ಪ್ರಕರಣಗಳಲ್ಲಿ ಆರೋಪಿಗಳನ್ನು ನಿಷೇಧಿತ ಉಗ್ರಗಾಮಿ ಸಂಘಟನೆಯೊಂದರ ಸದಸ್ಯರೆಂದು ಪೊಲೀಸರು ಪ್ರತಿಪಾದಿಸಿದ್ದರು.

ಬಿಹಾರದ ನಿವಾಸಿಗಳಾದ ಇರ್ಶಾದ್ ಅಲಿ ಹಾಗೂ ವೌರಿಫ್ ಕಮರ್ ಎಂಬವರನ್ನು ಹೆಚ್ಚುವರಿ ಸತ್ರ ನ್ಯಾಯಾಧೀಶ ರೀತೇಶ್ ಸಿಂಗ್ ದೋಷಮುಕ್ತಿಗೊಳಿಸಿದ್ದಾರೆ. ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು 2005ರಲ್ಲಿ ಅವರನ್ನು ಬಂಧಿಸಿತ್ತು.

ದಿಲ್ಲಿ ಹೈಕೋರ್ಟ್‌ನ ನಿರ್ದೇಶನದಂತೆ ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ, ಅವರಿಬ್ಬರು ವಿಶೇಷ ಘಟಕ ಹಾಗೂ ಗುಪ್ತಚರ ಬ್ಯೂರೊದ ಮಾಹಿತಿದಾರರೆಂದು ಪ್ರತಿಪಾದಿಸಿ, ಪ್ರಕರಣದ ಮುಚ್ಚುಗಡೆ ವರದಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News