ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ ವಾರ್ಷಿಕೋತ್ಸವದಲ್ಲಿ ನ್ಯಾ.ಸಂತೋಷ್ ಹೆಗ್ಡೆ

Update: 2016-12-26 14:21 GMT

ಬಂಟ್ವಾಳ, ಡಿ. 26:  ಮೌಲ್ಯಧಾರಿತ ಶಿಕ್ಷಣ ದೊರೆಯದ ವಿದ್ಯಾರ್ಥಿಗಳ ಬಾಳು ವ್ಯರ್ಥವಾಗಲಿದ್ದು , ಅವರಿಂದ ಈ ಸಮಾಜಕ್ಕೆ ಯಾವುದೇ ಪ್ರಯೋಜನವಾಗಲಾರದು. ಈ ಹಿನ್ನೆಲೆಯಲ್ಲಿ ರಾಜ್ಯದ 850 ಪ್ರಮುಖ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಅವರಲ್ಲಿ ಮೌಲ್ಯಗಳನ್ನು ಮೂಡಿಸಲು ಪ್ರಯತ್ನಿಸಿರುವೆನು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ರಝಾನಗರ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ 17ನೆ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿದ ಬಳಿಕ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ವಿ. ಶೆಟ್ಟಿ ಮಧ್ವ ವಹಿಸಿದ್ದರು.

ಎಂಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ, ಮಂಗಳೂರಿನ ಸ್ನೇಹ ದೀಪ ಸಂಸ್ಥೆ ಟ್ರಸ್ಟಿ ರಶೀದ್ ವಿಟ್ಲ, ಬದ್ರಿಯಾ ಮಸ್ಜಿದ್ ಇರ್ವತ್ತೂರಿನ ಅಧ್ಯಕ್ಷ ಅಬೂಬಕ್ಕರ್ ಟಿ.ಎಸ್.ಎನ್., ಬ್ಯಾರಿ ಅಕಾಡಮಿಯ ಸದಸ್ಯ ಅಬ್ದುಲ್ ಹಮೀದ್ ಕಲ್ಲಡ್ಕ, ಜಯಶ್ರೀ ಬಿ.ಸಾಲ್ಯಾನ್, ಸನಾ, ಗುಡ್ ಫ್ಯೂಚರ್ ಚೈಲ್ಡ್ ಹೈಸ್ಕೂಲ್ ಸಂಸ್ಥಾಪಕ ನಾಸಿರ್ ಖಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯ ಸಂಚಾಲಕ ಶೇಕ್ ರಹ್ಮತ್ತುಲ್ಲಾ ಸ್ವಾಗತಿಸಿದರು.

ಶೋಭಾ, ಮುಬೀನಾ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

ವನಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News