ಮಣಪ್ಪುರಂ ಫೈನಾನ್ಸ್ ಕಚೇರಿಗೆ ಕಳ್ಳರ ಲಗ್ಗೆ ; 9 ಕೋಟಿ ರೂ. ಮೌಲ್ಯದ 32 ಕೆ.ಜಿ.ಚಿನ್ನಾಭರಣ ಕಳವು
Update: 2016-12-27 10:03 IST
ಮುಂಬೈ, ಡಿ. 27: ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಉಲ್ಲಾಸನಗರದ ಶಾಖಾ ಕಚೇರಿಗೆ ನುಗ್ಗಿದ ಕಳ್ಳರು 9 ಕೋಟಿ ರೂ.ಮೌಲ್ಯದ 32 ಕೆ.ಜಿ. ಚಿನ್ನಾಭರಣಗಳನ್ನು ಎಗರಿಸಿಕೊಂಡು ಪರಾರಿಯಾದ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಕಟ್ಟಡದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನೇಪಾಳ ಮೂಲದ ಕರಣ್ ಥಾಪಾ ಕಾಣೆಯಾಗಿದ್ದಾನೆ. ಇಬ್ಬರು ಮುಸುಕುಧಾರಿಗಳು ಕಚೇರಿಯೊಳಗೆ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಇಬ್ಬರಿಗಿಂತ ಹೆಚ್ಚು ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕಟ್ಟರ‍್ ನ್ನು ಬಳಸಿಕೊಂಡು ಕಳ್ಳರು ಒಳಪ್ರವೇಶಿಸಿದ್ದಾರೆ. ಕಚೇರಿಯ ಹಿಂದಿನಿಂದ ಕಳ್ಳರು ಒಳಪ್ರವೇಶಿಸುವಾಗ ಸಿಸಿಟಿವಿ ನೆಟ್ ವರ್ಕ್ಸ್ ವಯರ‍್ ಗಳನ್ನುತುಂಡರಿಸಿದ್ದಾರೆ ಎಂದು ತಿಳಿದು ಬಂದಿದೆ.