ಅಝರ್ ಅಲಿ ನಾಟೌಟ್ ಆಗಿದ್ದರೂ ತಪ್ಪಾಗಿ ಔಟೆಂದ 3ನೆ ಅಂಪೈರ್ ..!

Update: 2016-12-27 18:28 GMT

ಮೆಲ್ಬೋರ್ನ್, ಡಿ.27: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನ ಎರಡನೆ ದಿನ ಶತಕ ದಾಖಲಿಸಿದ್ದ ಅಝರ್ ಅಲಿ 93 ರನ್ ಗಳಿಸಿದ್ದಾಗ ಮೂರನೆ ಅಂಪೈರ್ ಮಾಡಿಕೊಂಡ ಎಡವಟ್ಟಿನಿಂದಾಗಿ ಔಟಾಗುವ ಸಾಧ್ಯತೆ ಇತ್ತು.
   
 ಅಸದ್ ಶಫೀಕ್ 68.6ನೆ ಓವರ್‌ನಲ್ಲಿ ಬೌಲರ್ ಜಾಕ್ಸನ್ ಬರ್ಡ್ ಎಸೆದ ಚೆಂಡನ್ನು ಬೌಲರ್‌ನತ್ತ ಅಟ್ಟಿದರು. ಬರ್ಡ್ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ ಚೆಂಡು ಅವರ ಕೈಯಿಂದ ತಪ್ಪಿಸಿಕೊಂಡು ಸ್ಟಂಪ್‌ಗೆ ಬಡಿಯಿತು. ಅಂಪೈರ್ ರವಿ ಅವರು ಇದನ್ನು ದೃಢಪಡಿಸಲು 3ನೆ ಅಂಪೈರ್ ಅಭಿಪ್ರಾಯ ಕೇಳಿದರು. ಆದರೆ ಅಝರ್ ಅಲಿ ಕ್ರೀಸ್ ಬಿಟ್ಟಿರುವ ಶಂಕೆಯಿಂದ ಮೂರನೆ ಅಂಪೈರ್ ರಿಚರ್ಡ್ ಇಲಿಂಗ್‌ವರ್ಥ್ ಔಟೆಂದು ತೀರ್ಪಿತ್ತರು. ಒಮ್ಮೆಲೆ ಆಸ್ಟ್ರೇಲಿಯದ ಆಟಗಾರರಲ್ಲಿ ಯಶಸ್ಸಿನ ನಗು ಕಾಣಿಸಿಕೊಂಡಿತು. ಆದರೆ ಅದು ಬಹುಕಾಲ ಉಳಿಯಲಿಲ್ಲ.
 ಅಝರ್ ಅಲಿ ಕ್ರೀಸ್‌ನಲ್ಲಿರುವುದು ಟಿವಿ ರಿಪ್ಲೇಯಿಂದ ದೃಢಪಟ್ಟಿತು. ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡ ಅಂಪೈರ್ ರಿಚರ್ಡ್ ಇಲಿಂಗ್‌ವರ್ಥ್ ಅವರು ಅಝರ್ ಅಲಿ ನಾಟೌಟ್ ಎಂದರು. ಬಳಿಕ ಅಝರ್ ಅಲಿ ಬ್ಯಾಟಿಂಗ್ ಮುಂದುವರಿಸಿ ಆಸ್ಟ್ರೇಲಿಯದಲ್ಲಿ ಮೊದಲ ಶತಕ ದಾಖಲಿಸಿದರು. ಅಝರ್ ಅಲಿ ಔಟಾಗದೆ ದಾಖಲಿಸಿದ 139 ರನ್‌ಗಳ ನೆರವಿನಿಂದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಎರಡನೆ ದಿನದಾಟದಂತ್ಯಕ್ಕೆ 101.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 310 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News