×
Ad

ಈ ಆರು ಗೆಳತಿಯರ ಚಿತ್ರದಲ್ಲಿ ಅತ್ಯಂತ ವಿಚಿತ್ರ ವಿಷಯವೊಂದಿದೆ. ಕಂಡು ಹಿಡಿಯಬಲ್ಲೀರಾ...?

Update: 2016-12-27 17:00 IST

ಆರು ಸ್ನೇಹಿತೆಯರು ಒಟ್ಟಾಗಿ ಬಿಯರ್ ಕುಡಿಯುತ್ತ ಮೋಜಿನಲ್ಲಿ ತೊಡಗಿರುವ ಈ ಚಿತ್ರ ಮೊದಲ ನೋಟದಲ್ಲಿ ಇದೊಂದು ಮಾಮೂಲು ದೃಶ್ಯ ಎಂಬಂತೆ ಭಾಸವಾಗುತ್ತದೆ. ಆದರೆ ಈ ಚಿತ್ರದಲ್ಲಿ ವಿಲಕ್ಷಣ ವಿಷಯವೊಂದು ಅಡಗಿದೆ. ಇದೇ ಕಾರಣದಿಂದ ಈ ಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅದೇನೆಂದು ತಿಳಿದುಕೊಳ್ಳಲು ನೆಟಿಝನ್‌ಗಳು ತಿಣುಕಾಡುತ್ತಿದ್ದಾರೆ. ಅದೇನೆಂದು ನೀವು ಪತ್ತೆ ಹಚ್ಚಲು ಸಾಧ್ಯವೇ..?

ಮೂರು ದಿನಗಳ ಹಿಂದೆ ರೆಡಿಟ್‌ನಲ್ಲಿ ಈ ಚಿತ್ರ ಶೇರ್ ಆಗಿದೆ. ಅಲ್ಲಿಂದೀಚೆಗೆ 400 ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಈ ಚಿತ್ರದ ಹಲವಾರು ಇತರ ಆವೃತ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಿಡಿ,ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಈ ಚಿತ್ರದಲ್ಲಿರುವ ತಪ್ಪೇನೆಂದು ನಾವೇ ಹೇಳುತ್ತೇವೆ.

ಚಿತ್ರದಲ್ಲಿ ಆರು ಯುವತಿಯರಿದ್ದಾರೆ ಎನ್ನುವುದು ತುಂಬ ಸರಳ ಸಂಗತಿ. ಆದರೆ ಚಿತ್ರದಲ್ಲಿ ಅದೇಕೆ ಕೇವಲ ಐದೇ ಜೊತೆ ಕಾಲುಗಳು ಕಾಣುತ್ತಿವೆ?

ಸರಿ...ನಿಮಗೆ ಗೊತ್ತಾಯಿತು. ಈ ಚಿತ್ರದ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿ ಕೊಂಡಿರುವುದು ಏಕೆ ಎನ್ನುವುದು ಗೊತ್ತಾಯಿತೇ..?

‘‘ಮಧ್ಯದಲ್ಲಿರುವ ಯುವತಿಯರ ಕಾಲುಗಳನ್ನು ಹುಡುಕಿ’’ ಇದು ರೆಡಿಟ್‌ನಲ್ಲಿರುವ ಚಿತ್ರದ ಅಡಿಬರಹ ಮತ್ತು ಜನರು ಸಹಜವಾಗಿ ಅದನ್ನೇ ಮಾಡಿದ್ದಾರೆ.

ಐದು ಜೊತೆ ಕಾಲುಗಳಿರುವುದು ಚಿತ್ರದಲ್ಲಿ ಕಾಣುತ್ತಿದೆ. ಆದರೆ ಎಡದಿಂದ ಮೂರನೇ ಯುವತಿಗೆ ಕಾಲುಗಳೇ ಇಲ್ಲವಲ್ಲ. ಅವು ಎರಡನೇ ಯುವತಿಯ ಕಾಲುಗಳ ಹಿಂದಂತೂ ಇಲ್ಲ ಎಂದು ಓರ್ವ ನೆಟ್ಟಿಗ ವಿವರಿಸಿದರೆ,ಆ ಹುಡುಗಿಗೆ ಕಾಲುಗಳೇ ಇಲ್ಲ. ಅವಳ ಕಾಲುಗಳನ್ನು ಫೋಟೊ ಶಾಪ್....ಅಲ್ಲಲ್ಲ,ಫೋಟೊ ‘ಚಾಪ್’ ಮಾಡಲಾಗಿದೆ ಎಂದು ಇನ್ನೊಬ್ಬ ರೆಡಿಟ್ ಬಳಕೆದಾರ ಉತ್ತರಿಸಿದ್ದಾನೆ.

‘‘ನಿಜಕ್ಕೂ ಇದು ಮಿದುಳಿಗೆ ತುಂಬ ಕಸರತ್ತು ಮಾಡಿಸುತ್ತಿದೆ. ಇಂಥವು ನನಗೆ ತುಂಬ ಇಷ್ಟ ’’ಎಂದು ಇನ್ನೊಬ್ಬ ಕಮೆಂಟ್ ಹಾಕಿದ್ದಾನೆ.

 ನಿರಾಶೆ ಬೇಡ. ಚಿತ್ರದಲ್ಲಿಯ ಗೊಂದಲಕ್ಕೆ ಸರಳ ವಿವರಣೆಯುಂಟು.ಎಡದಿಂದ ಎರಡನೇ ಯುವತಿ ತನ್ನ ಕಾಲುಗಳನ್ನು ಮೊದಲ ಯುವತಿಯ ಕಾಲುಗಳ ಹಿಂದೆ ಬಚ್ಚಿಟ್ಟುಕೊಂಡಿರುವಂತೆ ಕಂಡು ಬರುತ್ತಿದೆ..ಅಲ್ಲವೇ..? ತಲೆ ಪೂರ್ತಿಯಾಗಿ ಚಿಟ್ಟು ಹಿಡಿಯಿತೇ? ಇರಲಿ ಬಿಡಿ...ಸರಿಯದ ಉತ್ತರ ಕಂಡುಕೊಳ್ಳಲು ಸಾಧ್ಯವೇ ನೋಡಿ....ಕಂಡುಕೊಂಡರೆ ನಮಗೂ ತಿಳಿಸಿಬಿಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News