×
Ad

ಆರಂಭಿಕ ದಾಂಡಿಗನಾಗಿ ವಿಶ್ವ ದಾಖಲೆ ನಿರ್ಮಿಸಿದ ಸಮಿತ್ ಗೋಹಿಲ್

Update: 2016-12-27 17:10 IST

ಜೈಪುರ, ಡಿ.27: ಒಡಿಶಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್‌ನ 26ರ ಹರೆಯದ ಆರಂಭಿಕ ಬ್ಯಾಟ್ಸ್‌ಮನ್ ಸಮಿತ್ ಗೋಹಿಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ 117 ವರ್ಷ ಹಳೆಯ ದಾಖಲೆಯನ್ನು ಮುರಿದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಐದನೆ ಹಾಗೂ ಅಂತಿಮ ದಿನದಾಟದಲ್ಲಿ ಅಜೇಯ 359 ರನ್ ಬಾರಿಸಿರುವ ಸಮಿತ್ ಈ ಸಾಧನೆ ಮಾಡಿದ್ದಾರೆ.

ಸಮಿತ್ 1899ರಲ್ಲಿ ಕೆನ್ಸಿಂಗ್‌ಟನ್ ಓವಲ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಸರ್ರೆ ತಂಡದ ಬಾಬ್ಬಿ ಅಬೆಲ್ ಅವರು ಸಮರ್‌ಸೆಟ್‌ನ ವಿರುದ್ಧ ದಾಖಲಿಸಿದ್ದ 357 ರನ್ ದಾಖಲೆಯನ್ನು ಮುರಿದರು.

 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾಕ್ ಕ್ರಿಕೆಟ್ ದಂತಕತೆ ಹನೀಫ್ ಮುಹಮ್ಮದ್(499) ಆರಂಭಿಕ ದಾಂಡಿಗನಾಗಿ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

 ಸಮಿತ್ ಸಾಹಸದ ನೆರವಿನಿಂದ ಗುಜರಾತ್ ತಂಡ 2ನೆ ಇನಿಂಗ್ಸ್‌ನಲ್ಲಿ 641 ರನ್ ಗಳಿಸಿದೆ.

ಅಜೇಯ 359 ರನ್ ಗಳಿಸಿರುವ ಸಮಿತ್ 723 ಎಸೆತಗಳನ್ನು ಎದುರಿಸಿ 45 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

‘‘ನನ್ನ ಈ ಸಾಧನೆ ವಿಶ್ವ ದಾಖಲೆಯಾಗುತ್ತದೆಯೆಂದು ಯೋಚಿಸಿಯೇ ಇರಲಿಲ್ಲ. ಸಾಧ್ಯವಾದಷ್ಟು ದೀರ್ಘಕಾಲ ಬ್ಯಾಟಿಂಗ್ ಮಾಡುವ ಯೋಚನೆಯಲ್ಲಿದ್ದೆ. ಕೋಚ್(ವಿಜಯ್ ಪಟೇಲ್) ಹಾಗೂ ಪಾರ್ಥಿವ್ ಪಟೇಲ್(ನಾಯಕ) ದೀರ್ಘ ಸಮಯ ಬ್ಯಾಟಿಂಗ್ ಮಾಡುವಂತೆ ಹೇಳಿದ್ದರು. ನಾನು ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದೆ. ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚುತ್ತಿಲ್ಲ’’ ಎಂದು ಗುಜರಾತ್‌ನ ಆನಂದ್ ಜಿಲ್ಲೆಯ ಸುಮಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News