ಕಾಪು : ಜಮಾಅತೆ ಇಸ್ಲಾಮಿ ಹಿಂದ್ ನಿಂದ ಪ್ರವಾದಿ ಜೀವನ ಸಂದೇಶ ಕಾರ್ಯಕ್ರಮ

Update: 2016-12-27 17:49 GMT

ಕಾಪು, ಡಿ.27: ವಿವಿಧತೆಯಲ್ಲಿ ಏಕತೆಯೊಂದಿಗೆ ಜೀವಿಸುತ್ತಿರುವ ಭಾರತ ದೇಶದಲ್ಲಿ ನಾವು ಅನುಸರಿಸುತ್ತಿರುವ ಧರ್ಮಗಳಿಂದ ಇನ್ನೊಂದು ಧರ್ಮ ದವರ ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕು. ಧರ್ಮಗಳು ಮಂದಿರಗಳ ಗೋಡೆಗಳಿಗೆ ಸೀಮಿತವಾಗಿರಬಾರದು ಮತ್ತು ಸಮಾಜವನ್ನು ಒಡೆಯುವ ಕೆಲಸಗಳಿಗೆ ಪ್ರೇರಕವಾಗಬಾರದು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಕಾಪು ಘಟಕದ ವತಿಯಿಂದ ಕಾಪುವಿನಲ್ಲಿ ರವಿವಾರ ಆಯೋಜಿಸಲಾದ ಪ್ರವಾದಿ ಮುಹಮ್ಮದ್ ಪೈಗಂಬರ ಜೀವನ ಮತ್ತು ಸಂದೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು.
ಮುಖ್ಯ ಅತಿಥಿಗಳಾಗಿ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶು ಪಾಲ ನೀಲಾನಂದ ನಾಯ್ಕ, ಕಾಪು ಪುರಸಭೆ ಸದಸ್ಯ ಅರುಣ್ ಶೆಟ್ಟಿ, ಸಾಲಿ ಡಾರಿಟಿ ಯೂಥ್ ಮೂಮೆಂಟ್ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯ ಶೌಕತ್ ಅಲಿ ಮಾತನಾಡಿದರು. ಸಮಾಜ ಸೇವಕ ಸೂರಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಆಲೆ ರಸೂಲ್ ಕುರಾನ್ ಪಠಿಸಿದರು. ಸ್ಥಾನೀಯ ಅಧ್ಯಕ್ಷ ಶಫೀ ಅಹ್ಮದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ವರ್ ಅಲಿ ಕಾಪು ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು. ಶಬೀ ಅಹಮದ್ ಕಾಝಿ, ರವೀಂದ್ರ ಮಲ್ಲಾರು, ಮುಷ್ತಾರ್ ಇಬ್ರಾಹಿಂ, ಮೋಹಿನಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News