ಆರ್‌ಬಿಐ ಡೆ.ಗವರ್ನರ್ ಆಗಿ ವಿರಲ್ ಆಚಾರ್ಯ ನೇಮಕ

Update: 2016-12-28 08:28 GMT

ಮುಂಬೈ,ಡಿ.28: ವಿರಲ್ ಆಚಾರ್ಯ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ಆಗಿ ಬುಧವಾರ ನೇಮಕಗೊಂಡಿದ್ದಾರೆ. ಆರ್‌ಬಿಐ ನಾಲ್ವರು ಉಪ ಗವರ್ನರ್‌ಗಳನ್ನು ಹೊಂದಿದ್ದು, ವಿಶ್ವನಾಥನ್, ಎಸ್.ಎಸ್.ಮುಂದ್ರಾ ಮತ್ತು ಆರ್.ಗಾಂಧಿ ಅವರು ಈ ಹುದ್ದೆಯಲ್ಲಿರುವ ಇತರ ಮೂವರಾಗಿದ್ದಾರೆ. ಮುಂದ್ರಾ ಮತ್ತು ಗಾಂಧಿ ಮಾಜಿ ಗವರ್ನರ್ ರಘುರಾಮ ರಾಜನ್ ಅವರ ಕೈಕೆಳಗೂ ಸೇವೆ ಸಲ್ಲಿಸಿದ್ದು, ವಿಶ್ವನಾಥನ್ ಅವರು ಹಾಲಿ ಗವರ್ನರ್ ಊರ್ಜಿತ್ ಪಟೇಲ್ ಅವರ ಅಧಿಕಾರಾವಧಿಯಲ್ಲಿ ಉಪ ಗವರ್ನರ್ ಆಗಿ ನೇಮಕಗೊಂಡಿದ್ದರು.

ರಘುರಾಮ ರಾಜನ್ ಅವರಂತೆ ಆಚಾರ್ಯ ಕೂಡ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಆರ್‌ಬಿಐಗೆ ನೇಮಕಗೊಳ್ಳುವ ಮುನ್ನ ಅವರು 2008ರಿಂದ ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರು. ಖ್ಯಾತ ಫೈನಾನ್ಸ್ ಜರ್ನಲ್‌ಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ಇತ್ತೀಚಿನ ‘ರೈಸಿಂಗ್ ಸ್ಟಾರ್ ಇನ್ ಫೈನಾನ್ಸ್ ’ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News