ಅಯ್ಯಪ್ಪ ಭಕ್ತನಿಗೆ ಜೊತೆ ನೀಡಲು 600 ಕಿ.ಮೀ. ನಡೆದ ನಾಯಿ!

Update: 2016-12-28 15:11 GMT

ನವೀನ್ ಮೊದಲ ಬಾರಿಗೆ 700 ಕಿಲೋಮೀಟರ್ ಪಾದಯಾತ್ರೆಯ ಎರಡನೇ ದಿನ ಅಂದರೆ ಡಿಸೆಂಬರ್ 8ರಂದು ಮಾಲುವನ್ನು ನೋಡಿದರು. ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆಗೆ ಯಾತ್ರೆ ಹೊರಟಿರುವ ನವೀನ್, ತನ್ನ ಜೀವಮಾನದ ಸ್ನೇಹಿತನ ಬಗ್ಗೆ ಹೆಮ್ಮೆಪಟ್ಟರು. ಯಾತ್ರೆಯಲ್ಲಿ ಅವರಿಗೆ ನಿರಂತರವಾಗಿ ಮಾಲು ಸಾಥ್ ನೀಡುತ್ತಿದ್ದಾನೆ.


ಮಾಲು ನವೀನ್‌ನ ಸಾಕುನಾಯಿಯಲ್ಲ. ಕೇವಲ ಬೀದಿನಾಯಿ. ಈ ಗಡ್ಡಧಾರಿಯ ಪಾದಯಾತ್ರೆ ಬಗ್ಗೆ ಕುತೂಹಲದಿಂದ ಇಡೀ ಯಾತ್ರೆಯುದ್ದಕ್ಕೂ ಹಿಂಬಾಲಿಸುತ್ತಾ ಬಂದಿದೆ. ಕೇರಳದ ಕೋಳಿಕೋಡ್ ಮೂಲದ ನವೀನ್ (38), 600 ಕಿಲೋಮೀಟರ್ ಪಾದಯಾತ್ರೆಯಲ್ಲಿ ಈಗಾಗಲೇ 17 ದಿನ ಕಳೆದಿದ್ದಾರೆ. ಡಿಸೆಂಬರ್ 23ರಂದು ಪಾದಯಾತ್ರೆಯಿಂದ ಮರಳುವಾಗ ಕೂಡಾ ಈ ಶ್ವಾನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಕೂಡಾ ಅವರ ಪಕ್ಕದಲ್ಲೇ ಕುಳಿತುಕೊಂಡಿತ್ತು.


ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಉದ್ಯೋಗಿಯಾಗಿರುವ ನವೀನ್, ತಮ್ಮ ಯಾತ್ರೆಯನ್ನು ಡಿಸೆಂಬರ್ 7ರಂದು ಆರಂಭಿಸಿದರು. ಹಲವು ಬೀದಿ ನಾಯಿಗಳಂತೆ ಇದರ ಬಗ್ಗೆ ಮೊದಲಿಗೆ ನವೀನ್ ಭಯಪಟ್ಟರು. ಆದರೆ ಇದು ಇತರ ನಾಯಿಗಳಿಗಿಂತ ಭಿನ್ನ ಎನ್ನುವುದು ಒಂದೇ ದಿನದಲ್ಲಿ ತಿಳಿಯಿತು.


"ಸುಮಾರು 80 ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಮೊದಲು ನಾನು ಗಮನಿಸಿದೆ. ನನ್ನ ಎದುರಿನಿಂದಲೇ ಅದು ಬಂದು ನನ್ನನ್ನು ತಡೆಯಿತು. ಅದನ್ನು ಓಡಿಸಲು ಹಲವು ಬಾರಿ ಪ್ರಯತ್ನಿಸಿದರೂ, ಅದು ಹೋಗಲೇ ಇಲ್ಲ" ಎಂದು ನವೀನ್ ವಿವರಿಸಿದರು. ಸುಮಾರು 20 ಮೀಟರ್ ಅಂತರದಲ್ಲಿ ಸಾಥ್ ನೀಡುತ್ತಿದೆ.

ಕೃಪೆ: thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News