×
Ad

ಬಾಂಬ್ ದಾಳಿಯಲ್ಲಿ ಅಘ್ಘಾನ್ ಸಂಸದನಿಗೆ ಗಾಯ

Update: 2016-12-29 00:00 IST

   ಕಾಬೂಲ್,ಡಿ.28: ಶಂಕಿತ ತಾಲಿಬಾನ್ ಬಂಡುಕೋರರು ಬುಧವಾರ ನಡೆಸಿದ ಬಾಂಬ್ ದಾಳಿಯಲ್ಲಿ ಅಫ್ಘಾನಿಸ್ತಾನದ ಸಂಸತ್ ಸದಸ್ಯ ಹಾಗೂ ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ಬಾಮಿಯಾನ್ ಪ್ರಾಂತದ ಸಂಸದ ಫಕೋರಿ ಬೆಹಿಷ್ಟಿ ಹಾಗೂ ಅವರ ಪುತ್ರ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಬೆಹಿಷ್ಟಿ ತನ್ನ ಪುತ್ರನೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಇನ್ನೂ ಹಲವಾರು ವಾಹನಗಳು ಜಖಂಗೊಂಡಿವೆ ಹಾಗೂ ಆಸುಪಾಸಿನ ಅಂಗಡಿಗಳ ಕಿಟಕಿಗಳಿಗೆ ಹಾನಿಯಾಗಿವೆ. ಕಳೆದ ಅಫ್ಘಾನ್ ಸಂಸತ್ ಸದಸ್ಯನೊಬ್ಬನನ್ನು ಗುರಿಯಾಗಿಸಿ ಬಂಡುಕೋರರು ನಡೆಸಿದ ಆತ್ಮಹತ್ಯಾದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಸಂಸತ್ ಸದಸ್ಯ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News