ಜ.8: ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆ

Update: 2016-12-29 18:38 GMT

 ಮಂಗಳೂರು, ಡಿ.29: ನಗರದ ಟಾಪ್ ಸಿಂಪ್ಯೋನಿ ಡ್ಯಾನ್ಸ್ ಸ್ಟುಡಿಯೊ ಹಾಗೂ ಸ್ವಚೀ ಕಲಾ ಆರ್ಟ್ಸ್ ಇವು ಗಳ ಸಂಯುಕ್ತಾಶ್ರಯದಲ್ಲಿ ‘ಜಲ್ವಾ 3, ಡ್ಯಾನ್ಸ್‌ವಾರ್’ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಜ.8ರಂದು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದ ಶಶಿಧರ್ ಕಾಡುಮಠ ತಿಳಿಸಿದರು.
   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 1ರಿಂದ ಸ್ಪರ್ಧೆ ನಡೆಯಲಿದ್ದು, ಕನ್ನಡ ಚಲನಚಿತ್ರ ರಂಗದ ಕಲಾವಿದ ಮಿತ್ರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
 ಸೀನಿಯರ್ ಮತ್ತು ಜೂನಿಯರ್ ಎರಡೂ ವಿಭಾಗದಲ್ಲಿ ವೈಯಕ್ತಿಕ ಮತ್ತು ಗ್ರೂಪ್‌ಗಳ ಸ್ಪರ್ಧೆಗೆ ಅವ ಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು. ಮಾಹಿತಿಗಾಗಿ ಮೊ.ಸಂ. 9845833681, 9900179564ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News