ವಿಜಯ ಬ್ಯಾಂಕ್‌ನಿಂದ ಎಂಟು ಗ್ರಾಮಗಳಲ್ಲಿ ಡಿಜಿಟಲೀಕರಣ

Update: 2017-10-03 19:37 GMT

ಪಡುಬಿದ್ರೆ, ಡಿ.29: ಉಡುಪಿ ಕ್ಷೇತ್ರಿಯ ಕಚೇರಿ ವ್ಯಾಪ್ತಿಯ ಎಂಟು ಗ್ರಾಮಗಳನ್ನು ಡಿಜಿಟಲೀಕರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬ್ಯಾಂಕ್‌ನ ಕ್ಷೇತ್ರಿಯ ಉಪ ಮಹಾಪ್ರಬಂಧಕ ಎಂ.ಜೆ. ನಾಗರಾಜ್ ಹೇಳಿದರು.
ಬೆಳಪುವಿನಲ್ಲಿ ಬ್ಯಾಂಕ್‌ನ 65ನೆ ಎಟಿಎಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯ ತಾನ್ಸೂರ, ಉಡುಪಿ ಜಿಲ್ಲೆಯ ಮಡಾಮಕ್ಕಿ, ಹೆಗ್ಗುಂಜೆ, ಕುಕ್ಕುಜೆ, ತಲ್ಲೂರು, ಗುಜ್ಜಾಡಿ, ಕುತ್ಯಾರು ಹಾಗೂ ಬೆಳಪು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಡಿಜಿಟಲೀಕರಣದ ಬಗ್ಗೆ ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದರು.
ನೋಟು ಅಮಾನ್ಯೀಕರಣದ ನಂತರ ಶಿರಸಿಯಲ್ಲಿ ಬ್ಯಾಂಕ್‌ನ 64ನೆ ಎಟಿಎಂ ಆರಂಭಿಸಲಾಗಿದೆ. ಬೆಳಪುವಿನಲ್ಲಿ ಆರಂಭಗೊಂಡು 65 ಎಟಿಎಂ ಆಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಇನ್ನೂ ಮೂರು ಎಟಿಎಂಗಳನ್ನು ತೆರೆಯಲಾಗುವುದು ಎಂದರು. ಬೆಳಪು ಗ್ರಾಮದಲ್ಲಿ ನಗದು ರಹಿತ ವಹಿವಾಟಿಗೆ ಒತ್ತು ನೀಡಲಾಗುವುದು. ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಎಟಿಎಂ ತೆರೆಯಲಾಗಿದೆ. ವಿಜಯ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಕಸ ವಿಲೇವಾರಿ ವಾಹನ ಖರೀದಿ, ಉದ್ಯಾನವನ, ವಾಚನಾಲಯ ಹಾಗೂ ಶವ ಸಂಸ್ಕರಣಾ ಟಕ ನಿರ್ಮಾಣ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮನವಿ ಮಾಡಿದರು.
ಬ್ಯಾಂಕ್‌ನ ಕ್ಷೇತ್ರಿಯ ಸಹಾಯಕ ಮಹಾಪ್ರಬಂಧಕಿ ವಿಜಯಾ ಪಿ. ಶೆಟ್ಟಿ, ಕಳತ್ತೂರು ಶಾಖೆಯ ಪ್ರಬಂಧಕಿ ನಯನಾ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News